ನ್ಯೂಸ್ ನಾಟೌಟ್: ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ಇನ್ನು ಮುಂದೆ ರಾತ್ರಿ 11 ಗಂಟೆ ಮೇಲೆ ಹೋಟೆಲ್ ತೆರೆಯುವಂಗಿಲ್ಲ ಎನ್ನುವ ಖಡಕ್ ವಾರ್ನಿಂಗ್ ಅನ್ನು ಪೊಲೀಸರು ನೀಡಿದ್ದಾರೆ.
ಈ ಮೂಲಕ ಕಟ್ಟು ನಿಟ್ಟಿನ ನಿಯಮವನ್ನು ಪೊಲೀಸರು ಜಾರಿಗೆ ತಂದಿದ್ದಾರೆ. ಬೇರೆ ತಾಲೂಕುಗಳಲ್ಲಿ ಈಗಾಗಲೇ ಇರುವ ನಿಯಮ ಸುಳ್ಯ ತಾಲೂಕಿನಾದ್ಯಂತ ಜಾರಿಗೆ ಬಂದಿರಲಿಲ್ಲ. ಇದೀಗ ಇಲ್ಲಿಯೂ ಹೋಟೆಲ್ ಮಾಲೀಕರಿಗೆ ಮೂಗುದಾರ ಹಾಕುವ ಕೆಲಸಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ.
ಕಳೆದ ಎರಡು ವರ್ಷದಿಂದ ತಡರಾತ್ರಿ 11 ಗಂಟೆ ಮೇಲೆಯೂ ಹೋಟೆಲ್ ಅನ್ನು ತೆರೆಯಲಾಗುತ್ತಿತ್ತು. ಕೆಲವು ಕಡೆ ಇದರಿಂದ ಗಲಾಟೆಗಳಂತಹ ಪ್ರಕರಣಗಳಾಗಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ಈ ಹಿನ್ನೆಲೆಯಲ್ಲಿ ಕಟ್ಟು ನಿಟ್ಟಿನ ನಿಯಮವನ್ನು ಜಾರಿಗೆ ತರಲಾಗಿದೆ ಎಂದು ತಿಳಿದು ಬಂದಿದೆ. ಹೋಟೆಲ್ ನವರು ಇನ್ನು ಎಷ್ಟು ದಿನಗಳು ಈ ಬಂದ್ ಆದೇಶ ಪಾಲಿಸುತ್ತಾರೆಂದು ಗೊತ್ತಿಲ್ಲ ಎಂದು ಜನರು ಆಡಿಕೊಳ್ಳುತ್ತಿದ್ದಾರೆ.