ನ್ಯೂಸ್ ನಾಟೌಟ್: ಡಿಜಿಟಲ್ ಜಗತ್ತು ವಿಸ್ತಾರವಾಗಿ ಬೆಳೆಯುತ್ತಿದೆ. ಇದರ ಪರಿಣಾಮವಾಗಿ ಹಲವು ಹೀರೋಗಳ ಸಿನಿಮಾಗಳ ಪೋಸ್ಟರ್ಗಳು ಲೀಕ್ ಆಗುತ್ತಿವೆ. ಈಗ ರಜನಿಕಾಂತ್, ಉಪೇಂದ್ರ, ಅಕ್ಕಿನೇನಿ ನಾಗಾರ್ಜುನ ನಟಿಸುತ್ತಿರುವ ‘ಕೂಲಿ’ ಸಿನಿಮಾದ ದೃಶ್ಯ ಲೀಕ್ ಆಗಿದೆ.
ಈ ಬಗ್ಗೆ ನಿರ್ದೇಶಕ ಲೋಕೇಶ್ ಕನಗರಾಜ್ ಅಸಮಧಾನ ಹೊರಹಾಕಿದ್ದಾರೆ. ಅಲ್ಲದೆ, ಅವರು ಕೈಮುಗಿದು ಒಂದು ಕೋರಿಕೆಯನ್ನು ಮಾಡಿಕೊಂಡಿದ್ದಾರೆ. ರಜನಿಕಾಂತ್ ಅವರು ಸದ್ಯ ‘ವೆಟ್ಟೈಯನ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ. ರಜನಿಕಾಂತ್, ಅಕ್ಕಿನೇನಿ ನಾಗಾರ್ಜುನ, ಉಪೇಂದ್ರ ಅವರಂಥ ಸ್ಟಾರ್ ಕಲಾವಿದರು ನಟಿಸುತ್ತಿರುವದರಿಂದ ಸಹಜವಾಗಿಯೇ ಸಿನಿಮಾಗಾಗಿ ಫ್ಯಾನ್ಸ್ ಕಾದಿದ್ದಾರೆ. ಈ ಸಿನಿಮಾದ ದೃಶ್ಯವೊಂದು ಸೋರಿಕೆ ಆಗಿದೆ.
ನಾಗಾರ್ಜುನ ಅವರು ಶೂಟ್ನಲ್ಲಿ ಭಾಗಿ ಆದ ದೃಶ್ಯ ಇದಾಗಿದೆ. ನಾಗಾರ್ಜುನ ಅವರು ಆ್ಯಕ್ಷನ್ ಅವತಾರದಲ್ಲಿ ಮಿಂಚಿದ್ದಾರೆ. ಇದನ್ನು ಶೂಟ್ ಮಾಡಿದ್ದು ಯಾರು, ಲೀಕ್ ಮಾಡಿದ್ದು ಯಾರು ಎನ್ನುವ ಪ್ರಶ್ನೆ ಮೂಡಿದೆ. ಈ ಘಟನೆ ಲೋಕೇಶ್ ಅವರಿಗೆ ಬೇಸರ ಮೂಡಿಸಿದೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ‘ಈ ರೆಕಾರ್ಡಿಂಗ್ನಿಂದಾಗಿ ಹಲವು ಜನರ ಎರಡು ತಿಂಗಳ ಶ್ರಮ ವ್ಯರ್ಥವಾಯಿತು. ಈ ರೀತಿಯ ಕೆಲಸ ಮಾಡಬೇಡಿ. ಇದು ಒಳ್ಳೆಯ ಅನುಭವವನ್ನು ನಾಶ ಮಾಡುತ್ತದೆ’ ಎಂದಿದ್ದಾರೆ.