ನ್ಯೂಸ್ ನಾಟೌಟ್ : ಅರ್ನಿಯ ಕಾಯಿಲೆಯಿಂದ ಬಳಲುತ್ತಿದ್ದ ಬೆಳ್ತಂಗಡಿಯ ಇಂದಬೆಟ್ಟು ಗ್ರಾಮದ ಬೈರೊಟ್ಟು ಮನೆ ನಿವಾಸಿ ಬೌತಿಶ್ ಪಿಂಟೋ(70) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಬೌತಿಶ್ ಪಿಂಟೋ ಎನ್ನುವ ವ್ಯಕ್ತಿ ವಿಪರೀತ ಅಮಲು ಪದಾರ್ಥ ಸೇವಿಸುವ ಚಟ ಹೊಂದಿದ್ದರು. ಅಲ್ಲದೆ ಅರ್ನಿಯ ಖಾಯಿಲೆಯಿಂದ ಬಳಲುತ್ತಿದ್ದು ಕೈಕಾಲಿನಲ್ಲಿ ಊತ ಬಂದು ನಡೆದಾಡಲು ಅಸಾಧ್ಯವಾಗಿದ್ದು ಕಣ್ಣು ಸರಿಯಾಗಿ ಕಾಣಿಸುತ್ತಿರಲಿಲ್ಲ. ಮೇ 9 ರಂದು ಬೌತಿಶ್ ಪಿಂಟೋರವರ ಪುತ್ರ ಸ್ಟ್ಯಾನಿ ಪಿಂಟೊ ರವರು ಕೆಲಸಕ್ಕೆ ಹೋಗಿ ಮರಳಿ ಸಂಜೆ 5.30 ರ ವೇಳೆ ಮನೆಗೆ ಬಂದಾಗ ಬೌತಿಶ್ ಪಿಂಟೋ ರವರು ಮನೆಯ ಬಚ್ಚಲು ಕೋಣೆಯಲ್ಲಿ ಬಾಯಿಯಲ್ಲಿ ನೊರೆ ಬಂದು ಬಿದ್ದುರುವುದನ್ನು ಕಂಡು ಉಪಚರಿಸಿ ತಕ್ಷಣ ಆಂಬುಲೆನ್ಸ್ ನಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅಲ್ಲಿನ ವೈದ್ಯರು ಪರೀಕ್ಷಿಸಿದಾಗ 6.50ರ ಸುಮಾರಿಗೆ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಬೌತಿಶ್ ಪಿಂಟೋ ವಿಪರೀತ ಕುಡಿತದಿಂದ ಹಾಗೂ ಅವರಿಗಿರುವ ಖಾಯಿಲೆಯಿಂದ ಬಳಲುತ್ತಿದ್ದು ಜೀವನದಲ್ಲಿ ಜಿಗುಪ್ಸೆಗೊಂಡು ಯಾವುದೋ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.