ನ್ಯೂಸ್ ನಾಟೌಟ್: ಶಾಲೆ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ 5ನೇ ತರಗತಿ ಬಾಲಕಿ ಮೇಲೆ ಎರಗಿದ ಕಾಮುಕ ಅತ್ಯಾಚಾರ ಎಸಗಿರುವ ಘಟನೆ ತ್ರಿಪುರಾದ ದಕ್ಷಿಣಭಾಗದ ಜಿಲ್ಲೆಯೊಂದರಲ್ಲಿ ನಡೆದಿದೆ.
ಇತ್ತೀಚಿಗಷ್ಟೇ ತ್ರಿಪುರಾದ ಉತ್ತರ ಭಾಗದ ಜಿಲ್ಲೆಯೊಂದರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಗ್ಯಾಂಗ್ರೇಪ್ ನಡೆದ ಪ್ರಕರಣ ಬೆಳಕಿಗೆ ಬಂದಿತ್ತು. ಇದಾದ ಮಾರನೇ ದಿನವೇ ಘಟನೆ ನಡೆದಿದೆ.
ಶಾಲೆಯಿಂದ ಮಗಳು ಹಿಂದಿರುಗದೇ ಇದ್ದಾಗ ಸಂತ್ರಸ್ತ ಬಾಲಕಿಯ ಪೋಷಕರು ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕಿದ್ದಾರೆ. ತ್ರಿಪುರಾದ ಬೆಲೊನಿಯಾ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಶನಿವಾರ ಸಂಜೆ ಸಂತ್ರಸ್ತ ಬಾಲಕಿಯ ಮನೆ ಹತ್ತಿರದಲ್ಲಿ ಆಕೆಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಬಾಲಕಿಯ ಪರಿಚಯಸ್ಥನೊಬ್ಬ ಮನೆ ಬಳಿ ಬಿಟ್ಟು ಹೋಗಿರುವುದು ಗೊತ್ತಾಗಿದೆ. ತನಿಖೆ ಮಾಡಿದಾಗ ಆತ ಅದೇ ಬಡಾವಣೆಯ 22 ವರ್ಷದ ಹುಡುಗ ಎಂದು ತಿಳಿದುಬಂದಿದೆ. ಸದ್ಯ ಪೊಲೀಸರು ಎಫ್ಐಆರ್ (FIR) ದಾಖಲಿಸಿದ್ದಾರೆ.
Click