ನ್ಯೂಸ್ ನಾಟೌಟ್: ಗುತ್ತಿಗೆದಾರನಿಗೆ ಜೀವ ಬೆದರಿಕೆ, ಜಾತಿ ನಿಂದನೆ ಕೇಸ್ನಲ್ಲಿ ಅರೆಸ್ಟ್ ಆಗಿರುವ ಶಾಸಕ ಮುನಿರತ್ನಗೆ ಬಿಜೆಪಿ ನೋಟಿಸ್ ನೀಡಿದೆ. ಮುನಿರತ್ನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬಿಜೆಪಿ, ಜಾತಿ ನಿಂದನೆ ಕುರಿತು ನೋಟಿಸ್ ಜಾರಿ ಮಾಡಿದೆ. ರಾಜ್ಯ ಬಿಜೆಪಿ ಶಿಸ್ತು ಸಮಿತಿಯಿಂದ ಮುನಿರತ್ನಗೆ ನೋಟಿಸ್ ನೀಡಲಾಗಿದ್ದು, ತಾವು ಆಡಿದ ಮಾತುಗಳ ಸಂಬಂಧ ಐದು ದಿನಗಳ ಒಳಗೆ ಸ್ಪಷ್ಟೀಕರಣ ಕೊಡುವಂತೆ ಸೂಚನೆ ನೀಡಲಾಗಿದೆ.
ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅವರ ಜೊತೆ ಚರ್ಚಿಸಿದ್ದೇನೆ. ಬಿಜೆಪಿ ಹಿರಿಯ ನಾಯಕನ ಜೊತೆಗೂ ಚರ್ಚೆ ಮಾಡಿದ್ದೇನೆ. ಈ ನಿಟ್ಟಿನಲ್ಲಿ ಒಂದು ನೋಟಿಸ್ ಕೊಟ್ಟಿದ್ದೇವೆ ಅಂತ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್ ಹೇಳಿದ್ದಾರೆ.
ಅವಹೇಳನಕಾರಿಯಾಗಿ ಮಾತಾಡಿರುವ ಮಾತು ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು, ಈ ಕುರಿತಂತೆ ತಮ್ಮ ಮೇಲೆ ಎಫ್ಐರ್ ಕೂಡ ದಾಖಲಾಗಿದೆ. ಈ ತರಹದ ಘಟನೆ ಪಕ್ಷದ ಶಿಸ್ತು ಸಮಿತಿಗೆ ಧಕ್ಕೆಯುಂಟು ಮಾಡಿದೆ. ಹೀಗಾಗಿ ಐದು ದಿನಗಳ ಒಳಗೆ ಇದರ ಬಗ್ಗೆ ಸ್ಪಷ್ಟನೆ ಕೊಡುಬೇಕು ಎಂದು ನೊಟೀಸ್ ನಲ್ಲಿ ತಿಳಿಸಲಾಗಿದೆ.
ಇನ್ನು ಮುನಿರತ್ನರಿಂದ ಸ್ಪಷ್ಟನೆ ಪಡೆದು, ಆ ನಂತರ ತಪ್ಪು ಅಂತ ಕಂಡು ಬಂದರೆ ಮುನಿರತ್ನ ವಿರುದ್ಧ ಶಿಸ್ತು ಕ್ರಮಕ್ಕೂ ಬಿಜೆಪಿ ಮುಂದಾಗಲಿದೆ ಎನ್ನಲಾಗಿದೆ. ಆರೋಪ ಸಾಭಿತಾದರೆ ಪಕ್ಷದಿಂದ ಉಚ್ಛಾಟನೆ ಮಾಡಲು ಬಿಜೆಪಿಯ ಹಿರಿಯರು ಸೂಚಿಸಿದ್ದಾರೆ ಎನ್ನಲಾಗಿದೆ.