ನ್ಯೂಸ್ ನಾಟೌಟ್: ಕೃಷಿ ಯಂತ್ರೋಪಕರಣಗಳ ತಯಾರಿ, ಮಾರಾಟ ಮತ್ತು ದುರಸ್ತಿ ಮಾಡುತ್ತಿರುವ ದೇವಿ ಇಂಜಿನಿಯರಿಂಗ್ ಏಜೆನ್ಸೀಸ್ ಇದೀಗ ಸುಳ್ಯ ಹಳೆಗೇಟ್ನಲ್ಲಿರುವ ರೆಹಮಾನಿಯಾ ಕಾಂಪ್ಲೆಕ್ಸ್ ಕಟ್ಟಡಕ್ಕೆ ಸ್ಥಳಾಂತರಗೊಂಡು ಶನಿವಾರ (ಸೆ.14) ಶುಭಾರಂಭಗೊಂಡಿದೆ.
ನೂತನ ಕಚೇರಿಯನ್ನು ಸುಳ್ಯದ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಪಿ.ಸಿ. ಜಯರಾಮ ಉದ್ಘಾಟಿಸಿದರು. ಸುಳ್ಯದ ಪ್ರಗತಿಪರ ಕೃಷಿಕ ಜಾನ್ ವಿಲಿಯಂ ಲಸ್ರಾದೋ ದೀಪ ಬೆಳಗಿಸಿದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ಸದಾನಂದ ಮಾವಜಿ, ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ. ಸುಧಾಕರ ರೈ, ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷರು ಟಿ.ಎಂ. ಶಹೀದ್, ದೇವಚಳ್ಳ ಗ್ರಾಮಪಂಚಾಯತ್ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ದೇವಿ ಹ್ಯಾಮರ್ಸ್ ಪಂಜ ಇದರ ಮಾಲೀಕ ನವೀನ್ ಕುಮಾರ್ ಚೀಮುಳ್ಳು, ರೆಹಮಾನಿಯಾ ಕಾಂಪ್ಲೆಕ್ಸ್ ಮಾಲೀಕ ಬಿ. ಮಹಮ್ಮದ್ ಮುಸ್ತಾಫ, ಸಂಸ್ಥೆಯ ಮಾಲೀಕರಾದ ಹರಿಯಪ್ಪ ಗೌಡ ಚೀಮುಳ್ಳು, ಸೀತಾರಾಮ ಚೀಮುಳ್ಳು ಮತ್ತಿತರರಿದ್ದರು. ಗ್ರಾಹಕರಿಗೆ ಉತ್ತಮ ರೀತಿಯ ಸೇವೆ ನೀಡುವುದೇ ನಮ್ಮ ಆದ್ಯತೆಯಾಗಿದೆ ಎಂದು ಸಂಸ್ಥೆಯ ಮಾಲೀಕರು ತಿಳಿಸಿದ್ದಾರೆ.