ನ್ಯೂಸ್ ನಾಟೌಟ್: ಆ್ಯಪಲ್ ಕಂಪನಿಯ ವಾರ್ಷಿಕ ಸಮಾವೇಶದಲ್ಲಿ ಬಹುನಿರೀಕ್ಷಿತ ಐಫೋನ್ 16 ಸರಣಿಯ ಪ್ರೀಮಿಯಂ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಿದೆ.
ಆ್ಯಪಲ್ ಪಾರ್ಕ್ನಲ್ಲಿರುವ ಸ್ಟೀವ್ ಜಾಬ್ಸ್ ಥಿಯೇಟರ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಂಪನಿಯು ತನ್ನ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ.
ನಿರೀಕ್ಷೆಯಂತೆ ಐಫೋನ್ –16 ಸರಣಿಯಲ್ಲಿ ಐಫೋನ್ 16, ಐಫೋನ್ 16 ಪ್ಲಸ್, ಐಫೋನ್ 16 ಪ್ರೊ ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್ ಎಂಬ ಹೊಸ ನಾಲ್ಕು ಮಾದರಿಗಳನ್ನು ಪರಿಚಯಿಸಲಾಗಿದೆ. ಈ ಮಾದರಿಗಳು ವಿನ್ಯಾಸ, ಕ್ಯಾಮೆರಾ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡ ಆಧುನಿಕ ತಂತ್ರಜ್ಞಾನದ ಹಾರ್ಡ್ವೇರ್ಗಳನ್ನು ಬಳಸಲಾಗಿದೆ ಎಂದು ಕಂಪನಿ ತಿಳಿಸಿದೆ.
ಐಫೋನ್ 16 ಸ್ಮಾರ್ಟ್ಫೋನ್ 128GB, 256GB ಮತ್ತು 512GB ಸ್ಟೋರೇಜ್ಗಳಲ್ಲಿ ಲಭ್ಯವಿದೆ. ಇವುಗಳ ದರ ಕ್ರಮವಾಗಿ ₹79,900, ₹ 89,999 ಮತ್ತು ₹1,09,900. ಐಫೋನ್ 16 ಪ್ಲಸ್ ಸ್ಮಾರ್ಟ್ಫೋನ್ 128GB, 256GB ಮತ್ತು 512GB ಸ್ಟೋರೇಜ್ಗಳಲ್ಲಿ ಲಭ್ಯವಿದೆ. ಇವುಗಳ ದರ ಕ್ರಮವಾಗಿ ₹89,900, ₹99,999 ಮತ್ತು ₹1,19,900. ಐಫೋನ್ 16 ಮತ್ತು 16 ಪ್ಲಸ್ ಎರಡೂ ಸ್ಮಾರ್ಟ್ಫೋನ್ಗಳು ಕಪ್ಪು, ಬಿಳಿ, ಗುಲಾಬಿ, ಟೀಲ್ ಮತ್ತು ಅಲ್ಟ್ರಾಮರೀನ್ ಬಣ್ಣಗಳಲ್ಲಿ ದೊರೆಯುತ್ತವೆ. ಐಫೋನ್ 16 ಪ್ರೊ ಸ್ಮಾರ್ಟ್ಫೋನ್ 128GB, 256GB, 512GB ಮತ್ತು 1TB ಸ್ಟೋರೇಜ್ಗಳಲ್ಲಿ ಲಭ್ಯವಿದೆ. ಇವುಗಳ ದರ ಕ್ರಮವಾಗಿ ₹1,19,900, ₹1,29,999, ₹1,49,999 ಮತ್ತು ₹1,69,900. ಐಫೋನ್ 16 ಪ್ರೊ ಮ್ಯಾಕ್ಸ್ ಸ್ಮಾರ್ಟ್ಫೋನ್ 256GB, 512GB ಮತ್ತು 1TB ಸ್ಟೋರೇಜ್ಗಳಲ್ಲಿ ಲಭ್ಯವಿದೆ. ಇವುಗಳ ದರ ಕ್ರಮವಾಗಿ ₹1,44,900, ₹1,64, 999 ಮತ್ತು ₹1,84,900 ಇವೆ ಎಂದು ಕಂಪನಿ ತಿಳಿಸಿದೆ.
Click