ನ್ಯೂಸ್ ನಾಟೌಟ್: ಇಲ್ಲೊಬ್ಬ ಸಾವಿನ ಮನೆಯಲ್ಲಿ ಹೆಣದ ಜೊತೆಗೆಯೇ ರೀಲ್ಸ್ ಮಾಡಿ ಅತ್ತಂತೆ ನಟಿಸಿದ್ದಾನೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾರಾದರೂ ತೀರಿ ಹೋದ್ರೆ, ಆ ಸಾವಿನ ಮನೆಯಲ್ಲಿ ದುಃಖದ ವಾತಾವರಣ ಮಡುಗಟ್ಟಿರುತ್ತದೆ. ಅದನ್ನೇ ಕಂಟೆಂಟ್ ಮಾಡಿಕೊಂಡು ಇಲ್ಲೊಬ್ಬ ಆಸಾಮಿ ಸಾವಿನ ಮನೆಯಲ್ಲಿಯೂ ರೀಲ್ಸ್ ಮಾಡಿದ್ದಾನೆ. ಈ ಕುರಿತ ವಿಡಿಯೋವನ್ನು ಸಂಜಯ್ ತ್ರಿಪಾಠಿ (sanjayjourmo) ಎಂಬವರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಹೆಣದ ಜೊತೆ ಕೂಡಾ ರೀಲ್ಸ್” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಎಲ್ಲರೂ ಹೆಣದ ಮುಂದೆ ಕೂತೂ ಜೋರಾಗಿ ಅಳುತ್ತಿದ್ದರೆ, ಅಲ್ಲಿಗೆ ಬಂದ ವ್ಯಕ್ತಿಯೊಬ್ಬ ಆ ಹೆಣದ ಮುಂದೆ ಅಳುತ್ತಾ ಎಮೋಷನಲ್ ಗೀತೆಗೆ ರೀಲ್ಸ್ ಮಾಡುತ್ತಿದ್ದಾನೆ.
ಸೆಪ್ಟೆಂಬರ್ 6 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ.
Click