ನ್ಯೂಸ್ ನಾಟೌಟ್: ಹೋಟೆಲ್ ನಲ್ಲಿ ರಾತ್ರಿ ಹೋದವನಿಗೆ ಊಟ ನಿರಾಕರಿಸಿದ್ದಾರೆಂದು ಸಿಟ್ಟಿಗೆದ್ದ ಚಾಲಕನೋರ್ವ ತನ್ನ ಲಾರಿಯನ್ನೇ ಹೋಟೆಲ್ ಗೆ ನುಗ್ಗಿಸಿದ ಆಘಾತಕಾರಿ ಘಟನೆಯೊಂದು ಪುಣೆ ಜಿಲ್ಲೆಯ ಇಂದಾಪುರ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.
ಪುಣೆ ಜಿಲ್ಲೆಯ ಇಂದ್ರಾಪುರದಲ್ಲಿ ಶುಕ್ರವಾರ(ಸೆ.6) ರಾತ್ರಿ ಈ ಘಟನೆ ಸಂಭವಿಸಿದೆ.
ಪುಣೆ-ಸೋಲಾಪುರ ಹೆದ್ದಾರಿಯ ಹಿಂಗಂಗಾವ್ನಲ್ಲಿರುವ ಹೊಟೇಲ್ ಗೋಕುಲ್ ರೆಸ್ಟೋರೆಂಟ್ ಗೆ ಲಾರಿ ಚಾಲಕ ಊಟ ಮಾಡಲೆಂದು ಬಂದಿದ್ದಾನೆ ಅಲ್ಲದೆ ತಡವಾಗಿದ್ದರಿಂದ ಹೋಟೆಲ್ ಸಿಬ್ಬಂದಿ ಊಟ ಮುಗಿದಿದೆ ಎಂದು ಹೇಳಿದ್ದಾರೆ. ಇಷ್ಟಕ್ಕೆ ಸಿಟ್ಟಾದ ಲಾರಿ ಚಾಲಕ ತನ್ನ ಲಾರಿಯನ್ನು ಹೋಟೆಲ್ ಕಟ್ಟಡದಕ್ಕೆ ಡಿಕ್ಕಿ ಹೊಡೆದಿದ್ದಾನೆ ಅಲ್ಲದೆ ಹೋಟೆಲ್ ಹೊರಗಡೆ ಇದ್ದ ಕಾರು ಬೈಕುಗಳಿಗೆ ಗುದ್ದಿ ಜಖಂಗೊಳಿಸಿದ್ದಾನೆ. ಇಷ್ಟಾಗುತ್ತಲೇ ಅಲ್ಲಿದ್ದ ಜನರು ಲಾರಿಯನ್ನು ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ನಿಲ್ಲಿಸದೆ ಮತ್ತೆ ಮತ್ತೆ ಹೋಟೆಲ್ ಕಟ್ಟಡಕ್ಕೆ ಲಾರಿಯನ್ನು ಡಿಕ್ಕಿ ಹೊಡೆಸಿದ್ದಾನೆ.
ಲಾರಿ ಚಾಲಕ ಪಾನಮತ್ತನಾಗಿದ್ದ ಎಂದು ಹೇಳಲಾಗಿದೆ ಕೊನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದನ್ನು ಕಂಡ ಲಾರಿ ಚಾಲಕ, ಲಾರಿಯನ್ನು ನಿಲ್ಲಿಸಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಲಾರಿ ಚಾಲಕನ ವಿರುದ್ಧ ದೂರು ದಾಖಲಾಗಿದೆ.
Click