ನ್ಯೂಸ್ ನಾಟೌಟ್: ಪದೇ ಪದೆ ಕೈಕೊಡುವ ವಿದ್ಯುತ್ ವ್ಯತ್ಯಯದಿಂದ ಆಸ್ಪತ್ರೆ ಸೇರಿದಂತೆ ಕೆವಿಜಿ ಸಂಕೀರ್ಣ ತೊಂದರೆಗೊಳಗಾಗುತ್ತಿದ್ದು, ಇದೀಗ ಯಾವುದೇ ಅಡೆತಡೆ ಇಲ್ಲದೆ ನಿರಂತರ ವಿದ್ಯುತ್ ಪೂರೈಕೆಗಾಗಿ 33/11KV ಸುಳ್ಯದ ಮೆಸ್ಕಾಂ ವಿದ್ಯುತ್ ಕೇಂದ್ರದಿಂದ 11KV HT ಡೆಡಿಕೇಟೆಡ್ ಎಕ್ಸ್ ಪ್ರೆಸ್ ಫೀಡರ್ ಭೂಗತ ಕೇಬಲ್ ಮೂಲಕ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಸಂಕೀರ್ಣಕ್ಕೆ ಸಂಪರ್ಕ ಕಲ್ಪಿಸಲಾಗಿದೆ.
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ (ರಿ.) ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಅವರು ಶುಕ್ರವಾರ ( ಸೆ. 6 ರಂದು) ಪೂಜೆ ನೆರವೇರಿಸಿ ಚಾಲನೆ ನೀಡಿದರು. ಈ ಸಂದರ್ಭ ಕೆವಿಜಿ ಮೆಡಿಕರಲ್ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಡಾ. ನೀಲಾಂಬಿಕೈ ನಟರಾಜನ್, ಮೆಡಿಕಲ್ ಸೂಪರಿಂಟೆಂಡೆಂಟ್ ಡಾ. ಸಿ. ರಾಮಚಂದ್ರ ಭಟ್, ಡಾ ಸುಬ್ರಹ್ಮಣ್ಯ, ಎನ್.ಎಮ್.ಸಿ ಆಡಳಿತಾಧಿಕಾರಿ ಚಂದ್ರಶೇಖರ್ ಪೇರಾಲು, ಕಾಲೇಜಿನ ಮುಖ್ಯ ಹಣಕಾಸು ಅಧಿಕಾರಿ ಧನಂಜಯ ಮದುವೆಗದ್ದೆ, ಕೆವಿಜಿ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ನ ಪ್ರಾಂಶುಪಾಲೆ ಬಿ ಎಮ್ ಪ್ರೇಮ, ಎಲೆಕ್ರ್ಟಿಕ್ ಎಂಜಿನಿಯರ್ ಸೊಮನಾಥ್ ಪೂಜಾರಿ, ಗುತ್ತಿಗೆದಾರರಾದ ರತ್ನಗಿರಿ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಇದರ ಸಿಇಒ ಭಾಸ್ಕರ್ ದೇವಸ್ಯ, ತಾಂತ್ರಿಕ ನಿರ್ದೇಶಕರಾದ ಹರಿಶ್ ಪ್ರಭು ಲಯೇಸನಿಂಗ್ ಆಫಿಸರ್ ವರುಣ್, ಕಾಲೇಜಿನ ಹೆಚ್ ಆರ್ ಚೀಫ್ ಮ್ಯಾನೇಜರ್ ಶಿವಪ್ರಸಾದ್ ಪಿ ಕಾಲೇಜಿನ ಕಚೇರಿ ಅಧೀಕ್ಷರಾದ ದಿನೇಶ್ ಪಿ, ಹೆಚ್-ಟಿ ಪವರ್ ಹೌಸ್ ವಿಭಾಗದ ಮುಖ್ಯಸ್ಥರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.