ನ್ಯೂಸ್ ನಾಟೌಟ್ : ಪ್ರತಿಷ್ಠಿತ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಕರ್ನಾಟಕ, ಬೆಂಗಳೂರು ಜುಲೈ – ಆಗಸ್ಟ್ -2024 ರಲ್ಲಿ ನಡೆಸಿದ ಪರೀಕ್ಷೆಯ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದೆ. ಪರೀಕ್ಷೆಯಲ್ಲಿ ಕೆ.ವಿ.ಜಿ ಆಯುರ್ವೇದ ವೈದ್ಯಕೀಯ ಕಾಲೇಜಿನ 12 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಹಾಗೂ 41 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಅಂತಿಮ ವರ್ಷದ ಬಿ.ಎ.ಎಂ.ಎಸ್ ಪದವಿ ವಿಭಾಗದ 59 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅಂಜನಾ ವಿ. ಪಿ., ಅಧೀನಾ ಪಿ., ಕೃತಿಕಾ ಎ. ಆರ್., ಶ್ರೀಜಾ ರೈ, ದೀಕ್ಷಾ ಡಿ. ಪಿ., ರೆನ್ಲಿನ್ ಬೇಬಿ, ಸ್ನೇಹಾ ಕೆ, ಸೌಮ್ಯ ವಿ., ಸನ್ನಿಧಿ ಎಸ್. ಕೆ., ಅಭೀಕ್ಷಾ ಎಸ್. ಎಸ್., ದೀಪ್ತಿ ಡಿ., ಶ್ರೀಲಕ್ಷ್ಮೀ ಜೆ. ಎಸ್., ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರನ್ನು, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ ಅಧ್ಯಕ್ಷ ಡಾ. ಚಿದಾನಂದ ಕೆ.ವಿ., ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ., ಉಪಾಧ್ಯಕ್ಷೆ ಶೋಭಾ ಚಿದಾನಂದ, ಕಾರ್ಯದರ್ಶಿ ಡಾ. ಐಶ್ವರ್ಯ ಕೆ.ಸಿ., ಜೊತೆ ಕಾರ್ಯದರ್ಶಿ ಹೇಮನಾಥ್ ಕೆ. ವಿ., ಕೋಶಾಧಿಕಾರಿ ಡಾ. ಗೌತಮ್ ಗೌಡ, ಕೌಂನ್ಸಿಲ್ ಮೆಂಬರ್ಗಳಾದ ಜಗದೀಶ್ ಅಡ್ತಲೆ, ಮೀನಾಕ್ಷಿ ಕೆ. ಎಚ್., ಧನಂಜಯ ಮದುವೆಗದ್ದೆ, ಅಡ್ವೈಸರ್ ಪ್ರೊ. ದಾಮೋಧರ ಗೌಡ ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ. ಲೀಲಾಧರ್ ಡಿ. ವಿ. ಅಭಿನಂದಿಸಿದ್ದಾರೆ.