ನ್ಯೂಸ್ ನಾಟೌಟ್: ಪ್ರಧಾನ ಮಂತ್ರಿ ನರೇಂದ್ರ ಮೋದಿ (ಸೆ.03) ಇಂದು ಬ್ರುನಿ (Brunei) ದೇಶಕ್ಕೆ ಭೇಟಿ ನೀಡಲಿದ್ದಾರೆ. ಬ್ರುನಿ ದೇಶದ ಸುಲ್ತಾನ, 7 ಸಾವಿರ ಕಾರುಗಳ ಒಡೆಯ ಹಾಜಿ ಹಸನಲ್ ಬೊಲ್ಕಿಯಾ ಮೋದಿಯವರನ್ನು ಸ್ವಾಗತಿಸಲಿದ್ದಾರೆ.
ಸುಲ್ತಾನ್ ಹಸನಲ್ ಬೊಲ್ಕಿಯಾ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಬ್ರುನಿ ದೇಶಕ್ಕೆ ಭೇಟಿ ನೀಡಲಿದ್ದಾರೆ. ಭಾರತದ ಇತಿಹಾಸದಲ್ಲಿ ಏಷ್ಯಾದ (Asia) ಆಗ್ನೇಯ ದೇಶಕ್ಕೆ ಭೇಟಿ ನೀಡುವ ಪ್ರಧಾನಿಯಲ್ಲಿ ಮೋದಿ ಮೊದಲಿಗರಾಗಲಿದ್ದಾರೆ. ಬ್ರುನಿ ದೇಶಕ್ಕೆ ಎರಡು ದಿನಗಳ ಕಾಲ ಭೇಟಿ ನೀಡಲಿರುವ ಪ್ರಧಾನಿ ಉಭಯ ದೇಶಗಳ 40 ವರ್ಷಗಳ ರಾಜತಾಂತ್ರಿಕತೆ ಬಗ್ಗೆ ಚರ್ಚಿಸಲಿದ್ದಾರೆ.
ಹಸನಲ್ ಬೊಲ್ಕಿಯಾ ಇಂಗ್ಲೆಂಡ್ನ ರಾಣಿ 2ನೇ ಎಲಿಜಬೆತ್ ಅವರ ನಂತರ ವಿಶ್ವದಲ್ಲಿಯೇ ಅತೀ ಹೆಚ್ಚು ಆಳ್ವಿಕೆ ಮಾಡಿದ ದೊರೆಯಾಗಿದ್ದಾರೆ. ಅವರು ಜಗತ್ತಿನಲ್ಲಿಯೇ ಅತಿ ಹೆಚ್ಚು ಖಾಸಗಿ ಕಾರುಗಳನ್ನು ಹೊಂದಿದವರಾಗಿದ್ದು, ಆ ಎಲ್ಲ ಕಾರುಗಳ ಒಟ್ಟು ಬೆಲೆ 4,197 ಕೋಟಿ (5 ಬಿಲಿಯನ್ ಡಾಲರ್) ಇದೆ.
ಬೊಲ್ಕಿಯಾ ಅವರ ಹತ್ತಿರ 7 ಸಾವಿರಕ್ಕಿಂತ ಹೆಚ್ಚು ಐಷರಾಮಿ ಕಾರುಗಳಿದ್ದು, ಅದರಲ್ಲಿ 6 ಸಾವಿರ ಕಾರುಗಳು ರೋಲ್ಸ್ ರಾಯ್ಸ್ ಕಾರುಗಳಾಗಿವೆ. ಇದು ಅಧಿಕೃತವಾಗಿ ಗಿನ್ನಿಸ್ ದಾಖಲೆ ಸೇರಿದೆ. ಅವರು 450 ಫೇರಾರಿ ಮತ್ತು 380 ಬೆಂಟ್ಲಿ ಹಾಗೆಯೇ ಲ್ಯಾಂಬೋರ್ಗಿನಿ, ಜಾಗ್ವಾರ್ಸ್, ಬಿಎಂಡಬ್ಯೂ, ಪೊರ್ಷಸ್, ಮೇಬ್ಯಾಕ್ಸ್, ಮೆಕ್ಲಾರೆನ್ಸ್ ಒಳಗೊಂಡಂತೆ ಹಲವಾರು ಕಾರುಗಳು ಹೊಂದಿದ್ದಾರೆ. ಅವರಲ್ಲಿದ್ದ ಬೆಂಟ್ಲಿ ಡೊಮಿನರ್ ಎಸ್ಯುವಿ ಎನ್ನುವ ಒಂದೇ ಕಾರು ಸುಮಾರು 67 ಕೋಟಿ (80 ಮಿಲಿಯನ್ ಡಾಲರ್) ಬೆಲೆಯುಳ್ಳದ್ದಾಗಿದೆ. 2007ರಲ್ಲಿ ತಮ್ಮ ಮಗಳ ಮದುವೆಯಲ್ಲಿ ರೋಲ್ಸ್ ರಾಯ್ಸ್ ಕಾರ್ ಒಂದಕ್ಕೆ ಸಂಪೂರ್ಣವಾಗಿ ಚಿನ್ನದ ಲೇಪನ ಮಾಡಿದ್ದರು. ಸುಲ್ತಾನ್ ತನ್ನ ಸ್ವಂತದ ಖಾಸಗಿ ಮೃಗಾಲಯ ಹೊಂದಿದ್ದಾರೆ. ಅದರಲ್ಲಿ 30 ಬಂಗಾಳದ ಹುಲಿಗಳು, ವಿವಿಧ ಬಗೆಯ ಹಕ್ಕಿಗಳಿವೆ. ಇವರು 747 ಬೋಯಿಂಗ್ ವಿಮಾನಗಳನ್ನು ಕೂಡ ಹೊಂದಿದ್ದಾರೆ.
Click