ನ್ಯೂಸ್ ನಾಟೌಟ್: ಅಕಾಲಿಕ ಗಾಳಿ ಮಳೆ ಕೊಡಗು ಜಿಲ್ಲೆಯ ವಿವಿಧೆಡೆ ಕಳೆದ ಕೆಲವು ದಿನಗಳಿಂದ ಸಾಕಷ್ಟು ಹಾನಿಗೆ ಕಾರಣವಾಗಿದೆ.
ಮಂಗಳವಾರ ರಾತ್ರಿ ಕುಶಾಲನಗರ ಬಳಿಯ ಹಾರಂಗಿ ವ್ಯಾಪ್ತಿಯಲ್ಲಿ ಭಾರೀ ಗಾತ್ರದ ಆಲಿಕಲ್ಲುಮಳೆ ಸುರಿದಿದ್ದು ಕೆಲವು ಮನೆಗಳು ಜಖಂಗೊoಡಿವೆ. ಹಾರಂಗಿ ಆಸುಪಾಸಿನಲ್ಲಿ ರಾತ್ರಿ ಏಕಾಏಕಿ ಭಾರೀ ಗಾಳಿಯೊಂದಿಗೆ ಮಳೆ ಸುರಿದಿರುವುದಲ್ಲದೆ, ಸುಮಾರು 6 ಕೆ.ಜಿ ತೂಕ ಸೇರಿದಂತೆ ಬೃಹತ್ ಗಾತ್ರದ ಆಲಿಕಲ್ಲುಗಳು ಬಿದ್ದಿವೆ. ಈ ವ್ಯಾಪ್ತಿಯಲ್ಲಿನೆಲೆಸಿರುವ ಬಡ ಕುಟುಂಬಗಳ ಮನೆಗಳು ಜಖಂಗೊoಡಿವೆ. ಕೂಡುಮಂಗಳೂರು ಗ್ರಾ.ಪಂ ಉಪಾಧ್ಯಕ್ಷ ಭಾಸ್ಕರ್ ನಾಯ್ಕ ಅವರು ಸ್ಥಳ ಪರಿಶೀಲನೆ ನಡೆಸಿದರು. ಸುಮಾರು ಐದಾರು ದಶಕಗಳಿಂದ 270 ಕ್ಕೂ ಅಧಿಕ ಬಡಕುಟುಂಬಗಳು ಇಲ್ಲಿ ವಾಸವಿದ್ದು, ಯಾವುದೇ ಹಕ್ಕುಪತ್ರ ಇವರಿಗೆ ದೊರಕಿಲ್ಲ. ಇದರಿಂದ ಗಾಳಿ-ಮಳೆ ಗೆ ಉಂಟಾಗುವ ನಷ್ಟಕ್ಕೆ ಸರ್ಕಾರದಿಂದ ಯಾವುದೇ ಪರಿಹಾರ ದೊ ರಕದೆ ಬಡ ವರ್ಗದ ಮಂದಿ ತೊಂ ದರೆಗೆ ಸಿಲುಕಿದ್ದಾರೆ. ಆಲಿಕಲ್ಲುಮಳೆ ಯಿಂದ ಉಂಟಾಗಿರುವ ಹಾನಿಯ ಬಗ್ಗೆ ಜಿಲ್ಲಾಡಳಿತ ಗಮನಹರಿಸಿ ಬಡ ಕುಟುಂಬಗಳಿಗೆ ನೆರವಾಗಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.