ಸುಳ್ಯ: ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಶನ್ ಮತ್ತು ಸುಳ್ಯ ವಾಲಿಬಾಲ್ ಅಸೋಸಿಯೇಶನ್ ನೇತೃತ್ವದಲ್ಲಿ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ ಶಿಪ್ 2022 ಸುಳ್ಯದಲ್ಲಿ ಇಂದು ರಾತ್ರಿ ಎಂಟು ಗಂಟೆಗೆ ಚಾಲನೆ ಸಿಕ್ಕಿದೆ. ಮಳೆಯ ಕಾರಣಕ್ಕೆ ಪಂದ್ಯ ಸ್ವಲ್ಪ ವಿಳಂಬವಾಗಿ ಆರಂಭವಾಯಿತು. ಕೂಟದಲ್ಲಿ ಪುರುಷರ ವಿಭಾಗದಲ್ಲಿ 6 ತಂಡಗಳು ಮತ್ತು ಮಹಿಳೆ ಯರ ವಿಭಾಗದಲ್ಲಿ 4 ತಂಡಗಳು ಸೆಣಸಾಡಲಿವೆ.
ಪುರುಷರ ವಿಭಾಗದ ಪಂದ್ಯಾಟ ಲೀಗ್ ನಾಕೌಟ್ ಮಾದರಿಯಲ್ಲಿ ನಡೆಯಲಿದೆ. ಪುರುಷರ ವಿಭಾಗದಲ್ಲಿ 6 ತಂಡಗಳನ್ನು 2 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಎ ಗುಂಪಿನಲ್ಲಿ ಬಿಪಿಸಿಎಲ್ ಕೊಚ್ಚಿನ್, ಕರ್ನಾಟಕ ಪೋಸ್ಟಲ್, ಎಸ್ಆರ್ಎನ್ ಯೂನಿವರ್ಸಿಟಿ ಚೆನ್ನೈ ತಂಡಗಳಿದ್ದರೆ, ಬಿ ಗುಂಪಿನಲ್ಲಿ ಕೆಎಸ್ಇಬಿ ತಿರುವನಂತಪುರ, ಐಒಬಿ ಚೆನ್ನೈ ಮತ್ತು ಯುನೈಟೆಡ್ ಇಂಡಿಯಾ ಸ್ಪೈಕರ್ ತಂಡಗಳಿವೆ. ಎರಡು ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದ 2 ತಡಗಳು ಸೆಮಿಫೈನಲ್ ಗೆ ಅರ್ಹತೆ ಪಡೆಯುತ್ತದೆ. ಸೆಮಿಫೈನಲ್ ನಲ್ಲಿ ಸೋತ 2 ತಂಡಗಳು ಮೂರನೇ ಸ್ಥಾನಕ್ಕಾಗಿ ಮೇ. 8ರಂದು ಆಡಬೇಕಾಗುತ್ತದೆ.
ಮಹಿಳೆಯರ ವಿಭಾಗದಲ್ಲಿ ರೌಂಡ್ ರಾಬಿನ್ ಲೀಗ್ ಮಾದರಿಯಲ್ಲಿ ಪಂದ್ಯಾಟ ನಡೆಯುತ್ತದೆ. ಕೇರಳ ಪೊಲೀಸ್ ತಿರುವನಂತಪುರ, ಐಸಿಎಫ್ ಚೆನ್ನೈ, ಎಸ್ಆರ್ಎಂ ಯೂನಿವರ್ಸಿಟಿ ಚೆನ್ನೈ, ಕರ್ನಾಟಕ ಕ್ಲಬ್ ಬೆಂಗಳೂರು ತಂಡಗಳು ಪಾಲ್ಗೊಳ್ಳುತ್ತಿವೆ. ಇದರಲ್ಲಿ ಅಗ್ರಸ್ಥಾನಕ್ಕೇರುವ 2 ತಂಡಗಳು ಮೇ. 8ರಂದು ನಡೆಯುವ ಫೈನಲ್ ಪಂದ್ಯದಲಲ್ಲಿಮುಖಾಮುಖಿಯಾಗಲಿವೆ. ಉಳಿದ 2 ತಂಡಗಳು ಮೂರನೇ ಸ್ಥಾನಕ್ಕಾಗಿ ಮೇ 7ರಂದು ನಡೆಯುವ ಪಂದ್ಯಾಟದಲ್ಲಿ ಸೆಣಸಾಡಲಿವೆ. ಮೇ.8ರಂದು ಸಂಜೆ 6 ಗಂಟೆಗೆ ಮಹಿಳೆ ಯರ ವಿಭಾಗದಲ್ಲಿ ಅಗ್ರಸ್ಥಾನಿಯಾದ ೨ ತಂಡಗಳ ನಡುವೆ ಫೈನಲ್ ನಡೆಯಲಿದೆ.7.30 ಕ್ಕೆ ಪುರುಷರ ವಿಭಾಗದಲ್ಲಿ 3ನೇ ಸ್ಥಾನಕ್ಕಾಗಿ ಸೆಮಿಫೈನಲ್ನಲ್ಲಿಸೋ ತ 2 ತಂಡಗಳ ನಡುವೆ ಪಂದ್ಯಾಟ ನಡೆಯಲಿದೆ. ರಾತ್ರಿ 11 ಗಂಟೆಗೆ ಪುರುಷರ ವಿಭಾಗದ ಫೈನಲ್ ಪಂದ್ಯ ನಡೆಯಲಿದೆ. ಪಂದ್ಯಾಟದ ಸಂಘಟನಾ ಕಾರ್ಯದರ್ಶಿ ಎನ್. ಜಯಪ್ರಕಾಶ್ ರೈ, ನಿಯಂತ್ರಣ ಮಂಡಳಿ ಚೆಯರ್ಮೆನ್ ಸೆಬಾಸ್ಟಿಯನ್ ಜಾರ್ಜ್, ಕರ್ನಾಟಕ ವಾಲಿಬಾಲ್ ಅಸೋಸಿಯೇಶನ್ ನ ಪ್ರಧಾನ ಕಾರ್ಯದರ್ಶಿ ಕೆ. ನಂದಕುಮಾರ್ ಹಾಗೂ ತಾಂತ್ರಿಕ ಮಂಡಳಿ ಚೆಯರ್ಮೆನ್ ಕೆ. ವೀರಸ್ವಾಮಿ ನೇತೃತ್ವದಲ್ಲಿ ಪಂದ್ಯಾಟಗಳು ನಡೆಯಲಿವೆ.