ನ್ಯೂಸ್ ನಾಟೌಟ್ : ಆತ 5 ವರ್ಷಗಳ ಹಿಂದೆ ಹೆಂಡತಿಯನ್ನು ಕೊಲೆ ಮಾಡಿ ಹೂತು ಹಾಕಿದ್ದ. ಬಳಿಕ ಹೆಂಡತಿ ಬೇರೊಬ್ಬನ ಜೊತೆ ಓಡಿ ಹೋಗಿದ್ದಾಳೆಂದು ಕುಟುಂಬಸ್ಥರಿಗೆ ನಂಬಿಸಿ ಪ್ರಕರಣವನ್ನು ಮುಚ್ಚಿ ಹಾಕಿ ಸೈಲೆಂಟ್ ಆಗಿದ್ದ ಎನ್ನಲಾಗಿದೆ. ಆದರೆ, ಇತ್ತೀಚೆಗೆ ಸಿಕ್ಕಿಬಿದ್ದ ಈತ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.
ಆರೋಪಿ ಹೆಸರು ಕಿರಣ್ ಕುಮಾರ್. ಮಾಗಡಿ ತಾಲೂಕಿನ ಹೂಜಗಲ್ ಗ್ರಾಮದ ನಿವಾಸಿ. ಕಳೆದ 10 ವರ್ಷಗಳ ಹಿಂದೆ ತಾವರೆಕೆರೆಯ ಪೂಜಾ ಎಂಬಾಕೆಯನ್ನು ಮದುವೆ ಆಗಿದ್ದ. ನಂತರ ಸಂಸಾರದಲ್ಲಿ ಬಿರುಕು ಉಂಟಾಗಿ ಅಗಾಗ್ಗೆ ನ್ಯಾಯ ಪಂಚಾಯಿತಿ ಕೂಡ ಆಗಿತ್ತು. ನಂತರ 2019 ರಲ್ಲಿ ಹೆಂಡತಿಯ ನಡತೆ ಶಂಕಿಸಿ ಕೊಲೆಗೈದು ಗ್ರಾಮದ ಪಕ್ಕದ ಚೀಲೂರು ಫಾರೆಸ್ಟ್ನಲ್ಲಿ ಸ್ನೇಹಿತರಿಬ್ಬರ ಜೊತೆಗೂಡಿ ಹೂತು ಹಾಕಿದ್ದ. ಆದರೆ ಫಾರೆಸ್ಟ್ನಲ್ಲಿ ಟ್ರಂಚ್ ತೋಡುವ ಕೆಲಸ ಆರಂಭವಾದಾಗ ನಾಲ್ಕು ತಿಂಗಳ ನಂತರ ಹೆಣವನ್ನು ಹೊರತೆಗೆದು, ಕಳೆಬರಗಳನ್ನ ಸುಟ್ಟು ಮಣ್ಣು ಮುಚ್ಚಿದ್ದ. ಸಂಬಂಧಿಕರಿಗೆ ತನ್ನ ಹೆಂಡತಿ ಬೇರೊಬ್ಬನ ಜೊತೆ ಓಡಿ ಹೋಗಿ ಮದುವೆಯಾಗಿದ್ದಾಳೆಂದು ನಂಬಿಸಿದ್ದ ಆಸಾಮಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಕಳೆದ 20 ದಿನಗಳ ಹಿಂದೆ ಇದೆ ಹೂಜಗಲ್ ಪಕ್ಕದ ಬೆಟ್ಟದಲ್ಲಿ ಸ್ನೇಹಿತ ಹೆಂಡತಿ ಕೊಲೆ ಕೇಸ್ನಲ್ಲಿ ಮಾಗಡಿ ಪೊಲೀಸರಿಗೆ ತಗಲಾಕಿಕೊಂಡಿದ್ದ ಕಿರಣ್ ಪೊಲೀಸರ ವಿಚಾರಣೆ ವೇಳೆ ತನ್ನ ಹೆಂಡತಿ 10 ವರ್ಷಗಳ ಹಿಂದೆಯೆ ಕಾಣೆಯಾಗಿದ್ದಾಳೆ. ಮಿಸ್ಸಿಂಗ್ ಪ್ರಕರಣ ಕೂಡಾ ದಾಖಲಿಸಿದ್ದಾಗಿ ಹೇಳಿದ್ದ. ಇದರಿಂದ ಅನುಮಾನಗೊಂಡ ಪೊಲೀಸರು ಮೃತ ಪೂಜಾಳ ತಾಯಿ ಗೌರಮ್ಮಳನ್ನು ಸಂಪರ್ಕಿಸಿದ 5 ವರ್ಷದ ಹಿಂದೆ ಮಗಳು ಬೇರೊಬ್ಬನ ಜೊತೆ ಓಡಿಹೋಗಿದ್ದಾಳೆಂದು ತನ್ನ ಅಳಿಯ ಹೇಳಿದ್ದಾನೆ ಎಂದಿದ್ದಳು. ಇದರಿಂದ ಪೊಲೀಸರಿಗೆ ಮತ್ತಷ್ಟು ಅನುಮಾನ ಹೆಚ್ಚಾಗಿ, ಬಳಿಕ ಮಿಸ್ಸಿಂಗ್ ಕಂಪ್ಲೆಂಟ್ ಹುಡುಕಿದ ಪೊಲೀಸರಿಗೆ ಆ ಕಂಪ್ಲೆಂಟ್ ಸಿಕ್ಕದಿದ್ದಾಗ ಆತನ ಸ್ನೇಹಿತರಾದ ಭರತ್ ಹಾಗೂ ಕುಮಾರ್ನನ್ನು ವಿಚಾರಿಸಿದ್ದಾರೆ. ಆಗ ಸತ್ಯ ಬಯಲಾಗಿದೆ. ಕೌಟುಂಬಿಕ ವಿಚಾರದಲ್ಲಿ ಜಗಳ ವಿಕೋಪಕ್ಕೆ ಹೋಗಿ ಆಕೆಯನ್ನು ಕೊಂದು ಹೂತು ಹಾಕಿ, ಇತ್ತೀಚೆಗೆ ಹೊರ ತೆಗೆದು ಕಳೆಬರಹವನ್ನು ಸುಟ್ಟು ಹಾಕಿದ್ದಾನೆ ಎಂದು ಸ್ನೇಹಿತರು ಒಪ್ಪಿಕೊಂಡಿದ್ದಾರೆ.
Click