ನ್ಯೂಸ್ ನಾಟೌಟ್: ಭಾರತೀಯ ರಿಸರ್ವ್ ಬ್ಯಾಂಕ್ ನ ನೋಟು ಮುದ್ರಣ ಪ್ರೈವೇಟ್ ಲಿಮಿಟೆಡ್ ನ ಮೈಸೂರಿನ ನೋಟು ಮುದ್ರಣ ಘಟಕದಲ್ಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಹಾಯಕ ವ್ಯವಸ್ಥಾಪಕರು, ಭದ್ರತಾ ವ್ಯವಸ್ಥಾಪಕ ಹುದ್ದೆಗಳಿಗಾಗಿ ಆಸಕ್ತ/ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಬೇಕಾದ ವಯೋಮಿತಿ, ಅರ್ಜಿ ಶುಲ್ಕ, ವಿದ್ಯಾರ್ಹತೆ, ವೇತನ ಶ್ರೇಣಿ, ಹುದ್ದೆಗಳ ವಿವರ ಸೇರಿದಂತೆ ವಿವರವಾದ ಮಾಹಿತಿ ನೀಡಲಾಗಿದೆ.
ಒಟ್ಟು ಹುದ್ದೆಗಳು- 4 ಸಹಾಯಕ ವ್ಯವಸ್ಥಾಪಕರು- (ಭದ್ರತೆ) 3 ಭದ್ರತಾ ವ್ಯವಸ್ಥಾಪಕ- 1
ವಿದ್ಯಾರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ವೃತ್ತಿ ಅನುಭವವನ್ನು ಹೊಂದಿದವರಿಗೆ ಆದ್ಯತೆ ಇರುತ್ತದೆ. ವಯೋಮಿತಿ: 45 ರಿಂದ 52 ವರ್ಷಗಳು.
ಸಂಬಳ: ಸಹಾಯಕ ವ್ಯವಸ್ಥಾಪಕರು (ಭದ್ರತೆ) 56,100 ರೂ. ಭದ್ರತಾ ವ್ಯವಸ್ಥಾಪಕರು: 69,700 ರೂ. ಎನ್ನಲಾಗಿದೆ. ಅರ್ಜಿಗಳನ್ನು ಆಫ್ಲೈನ್ ಮೂಲಕ ಸಲ್ಲಿಸಬಹುದಾಗಿದೆ.
ಅರ್ಜಿ ಶುಲ್ಕ: SC, ST, ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕವಿಲ್ಲ. ಇತರೆ ಅಭ್ಯರ್ಥಿಗಳಿಗೆ 300 ರೂ. ಇದ್ದು ಡಿಮ್ಯಾಂಡ್ ಡ್ರಾಫ್ಟ್ ಅಥವಾ ಬ್ಯಾಂಕ್ ಪೇ ಆರ್ಡರ್ ಮೂಲಕ ಹಣ ಪಾವತಿಸಬೇಕಾಗಿದೆ. ಇಲಾಖೆ ವೆಬ್ಸೈಟ್ಗೆ ಭೇಟಿ ನೀಡಿ ಅರ್ಜಿಯನ್ನು ಡೌನ್ಲೋಡ್ ಮಾಡಿ ಅದನ್ನು ಸಂಪೂರ್ಣವಾಗಿ ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು ಎಂದು ಸಂಸ್ಥೆ ತಿಳಿಸಿದೆ.
ಚೀಫ್ ಜನರಲ್ ಮ್ಯಾನೇಜರ್, ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಾನ್ ಪ್ರೈವೇಟ್ ಲಿಮಿಟೆಡ್ ನಂ. 3 ಮತ್ತು 4, I ಹಂತ, I ಹಂತ, B.T.M. ಲೇಔಟ್, ಬನ್ನೇರುಘಟ್ಟ ರಸ್ತೆ, ಅಂಚೆ ಪೆಟ್ಟಿಗೆ ಸಂಖ್ಯೆ 2924, ಡಿ.ಆರ್. ಕಾಲೇಜು ಪೋಸ್ಟ್ ಬಾಕ್ಸ್ ನಂ. 2924, ಬೆಂಗಳೂರು – 560 029. ಅರ್ಜಿಗಳನ್ನು ಸೆಪ್ಟೆಂಬರ್ 06 ರೊಳಗೆ ಈ ವಿಳಾಸಕ್ಕೆ ಕಳುಹಿಸಬೇಕು. ಕೆಲವು ಪ್ರದೇಶಗಳಿಗೆ ಸೆಪ್ಟೆಂಬರ್ 13ರವರೆಗೆ ವಿಸ್ತರಿಸಲಾಗಿದೆ.