ನ್ಯೂಸ್ ನಾಟೌಟ್: ಕೆ.ಎಸ್.ಆರ್.ಟಿ.ಸಿ ಬಸ್ಸು ಢಿಕ್ಕಿ ಹೊಡೆದ ಪರಿಣಾಮ ರಸ್ತೆಗೆಸೆಯಲ್ಪಟ್ಟ ಬೈಕ್ ಸವಾರನ ಖಾಸಗಿ ಬಸ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಆ.25ರ ರಾತ್ರಿ ಕಾಸರಗೋಡಿನ ಹೊಸದುರ್ಗ ಠಾಣಾ ವ್ಯಾಪ್ತಿಯ ಪಡನ್ನಕ್ಕಾಡ್ ನಲ್ಲಿ ನಡೆದಿದೆ.
ಪಡನ್ನ ಕ್ಕಾಡ್ ಮೇಲ್ಸೇತುವೆಯಲ್ಲಿ ಈ ಅಪಘಾತ ಸಂಭವಿಸಿದೆ. ಕಾಞಂಗಾಡ್ ನ ಖಾಸಗಿ ಸಂಸ್ಥೆಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ಶ್ರೀನೇಶ್ ಕಣ್ಣೂರಿ ನಿಂದ ಬೇಡಡ್ಕಕ್ಕೆ ಬೈಕಿನಲ್ಲಿ ಬರುತ್ತಿದ್ದ ವೇಳೆ ಈ ಅಪಘಾತ ನಡೆದಿದೆ. ಮೃತರನ್ನು ಸಾಫ್ಟ್ ವೇರ್ ಇಂಜಿನಿಯರ್ ಬೇಡಡ್ಕ ತೆಕ್ಕೆಕರೆ ನಿವಾಸಿ ಪಿ. ಶ್ರೀನೇಶ್ (39) ಎಂದು ಗುರುತಿಸಲಾಗಿದೆ.
ಪೊಲೀಸರು ತನಿಖೆ ನಡೆಸುತ್ತಿದ್ದಾರೆ.