ನ್ಯೂಸ್ ನಾಟೌಟ್ : ಇತ್ತೀಚಿನ ದಿನಗಳಲ್ಲಿ ಪ್ರಾಕೃತಿಕ ವಿಕೋಪದಂತಹ ಪ್ರಕರಣಗಳು ಹೆಚ್ಚುತ್ತಿದೆ. ಗುಡ್ಡಗಾಡು, ಬೆಟ್ಟ ಗುಡ್ಡಗಳ ನಡುವೆ ಇರುವ ಜನರು ಆತಂಕದಲ್ಲೇ ಕಾಲ ಕಳೆಯುವಂತಾಗಿದೆ. ಕೇರಳದ ವಯನಾಡಿನಲ್ಲಿ ದುರಂತ ಸಂಭವಿಸಿದ ಬಳಿಕ ಇದೀಗ ಕೊಡಗು ಜಿಲ್ಲೆಯ ಜನರಿಗೂ ಕೂಡ ಆತಂಕದ ಸ್ಥಿತಿ ನಿರ್ಮಾಣಗೊಂಡಿದೆ.
ಕೊಡಗು-ಮೈಸೂರು ಗಡಿ ಭಾಗದಲ್ಲಿ ಭೂಕಂಪನ ಇಂದು ಬೆಳ್ ಬೆಳಗ್ಗೆ (ಆ.೨೩) ರಂದು ಸಂಭವಿಸಿದೆ. ಬೆಳಗ್ಗೆ 6.30 ರ ಸುಮಾರಿಗೆ ಸಂಭವಿಸಿದೆ. ಸುಮಾರು 2-3 ಸೆಕೆಂಡ್ ಭಾರಿ ಶಬ್ಧ ಉಂಟಾಗಿದೆ. ಕಂಪನದಿಂದ ಕುಶಾಲನಗರ ತಾಲೂಕಿನ ಮುಳ್ಳು ಸೋಗೆ, ಬಸವತ್ತೂರು ಎಂಬಲ್ಲಿ ಮೊದಲನೆಯದಾಗಿ ವಿಚಿತ್ರ ಶಬ್ಧ ಕೇಳಿದೆ. ಜನ ಹೆದರಿಕೆಯಿಂದ ಹೊರಗೆ ಓಡಿ ಬಂದಿದ್ದಾರೆ.