ನ್ಯೂಸ್ ನಾಟೌಟ್: ಕಂಗನಾ ರಣಾವತ್ ನಟಿಸಿ, ನಿರ್ದೇಶಿಸಿರುವ ‘ಎಮರ್ಜೆನ್ಸಿ’ ಸಿನಿಮಾದ ಟ್ರೇಲರ್ ವಾರದ ಹಿಂದಷ್ಟೇ ರಿಲೀಸ್ ಆಗಿತ್ತು. ಈ ಬೆನ್ನಲ್ಲೇ ಸಿನಿಮಾ ವಿವಾದ ಮೂಡುವ ಸೂಚನೆ ನೀಡಿತ್ತು. ಈಗ ಸಿನಿಮಾ ಮೇಲೆ ಬ್ಯಾನ್ ಹೇರುವಂತೆ ಅಕಲಾ ತಕ್ತ್ ಹಾಗೂ ಶಿರೋಮಣಿ ಗುರುದ್ವಾರ ಪರಬಂಧಕ್ ಸಮಿತಿ (ಎಸ್ಜಿಪಿಸಿ) ಒತ್ತಾಯ ಮಾಡಿದೆ.
ಸಿಖ್ ವ್ಯಕ್ತಿಗಳನ್ನು ತಪ್ಪಾಗಿ ತೋರಿಸಲಾಗಿದೆ ಮತ್ತು ಸಮುದಾಯದ ಇತಿಹಾಸವನ್ನು ಅಗೌರವಿಸುವ ಕೆಲಸ ಆಗಿದೆ ಎಂದು ಸಮಿತಿಯವರು ದೂರಿದ್ದಾರೆ. ಎಸ್ಜಿಪಿಸಿ ಮುಖ್ಯಸ್ಥ ಹರ್ಜಿಂದರ್ ಸಿಂಗ್ ಧಮಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ಎಮರ್ಜೆನ್ಸಿ ಸಿನಿಮಾ ಸಿಖ್ ಸಮುದಾಯವನ್ನು ಕೆಟ್ಟದಾಗಿ ತೋರಿಸಲಾಗಿದೆ. ಸಿಖ್ ಸಮುದಾಯದವರಿಗೆ ಮಸಿ ಬಳಿಯುವ ಕೆಲಸ ಆಗಿದೆ. ಜರ್ನೈಲ್ ಸಿಂಗ್ ಬಿಂದ್ರನ್ವಾಲೆ ಅವರನ್ನು ನಾವು ಹುತಾತ್ಮ ಎಂದು ಪರಿಗಣಿಸಿದ್ದೇವೆ’ ಎಂಬುದಾಗಿ ಮಾತನಾಡಿದ್ದಾರೆ.
1975ರಲ್ಲಿ ತುರ್ತು ಪರಿಸ್ಥಿತಿ ಹೇರಲಾಯಿತು. ಇದನ್ನು ಆಧರಿಸಿ ಕಂಗನಾ ಸಿನಿಮಾ ಮಾಡಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ರಾಜಕೀಯ ಜೀವನ, ಅವರು ಎದುರಿಸಿದ ಸವಾಲುಗಳನ್ನು ತೋರಿಸಲಾಗಿದೆ. ಈ ಟ್ರೇಲರ್ನ ಸಿಖ್ ಸಮುದಾಯವರು ಇಷ್ಟಪಟ್ಟಿಲ್ಲ. ಈಗಾಗಲೇ ಎಸ್ಜಿಪಿಸಿ ಅವರು ಕಂಗನಾ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಅವರ ವಿರುದ್ಧ ಎಫ್ಐಆರ್ ದಾಖಲಿಸಲು ಆಗ್ರಹಿಸಲಾಗಿದೆ. ಈ ಸಿನಿಮಾ ಸೆಪ್ಟೆಂಬರ್ 6ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ.
Click