ಸಂಪಾಜೆ: ಮೆಸ್ಕಾಂ ಕಾರ್ಯಪಾಲಕ ಇಂಜಿನೀಯರ್ ರಾಮಚಂದ್ರ ಶನಿವಾರ ಸಂಪಾಜೆ ಗ್ರಾಮದ ರಾಜರಾಂಪುರ ವಿದ್ಯುತ್ ಸಬ್ ಸ್ಟೇಷನ್ ಜಾಗ ಪರಿಶೀಲನೆ ನಡೆಸಿದರು. ಶೀಘ್ರದಲ್ಲಿ ಸ್ಥಳಕ್ಕೆ ಬೇಲಿ ಹಾಕಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಸಂಪಾಜೆ ಗ್ರಾಮದ ಹಳೆಯದಾದ ತಂತಿಗಳ ಬದಲಾವಣೆ ಹಾಗೂ ವಿದ್ಯುತ್ ಲೈನ್ ಗೆ ತಾಗಿರುವ ಮರದ ಕೊಂಬೆ ತೆರವು ಸಂಪಾಜೆ ಗ್ರಾಮಕ್ಕೆ ತಡೆ ರಹಿತ ವಿದ್ಯುತ್ ವ್ಯವಸ್ಥೆಗೆ ಟ್ರಾನ್ಸ್ ಫಾರ್ಮರ್ ಅಳವಡಿಕೆ ಬಗ್ಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ. ಕೆ. ಹಮೀದ್ ಮನವರಿಕೆ ಮಾಡಿದರು. ಜೂನಿಯರ್ ಇಂಜಿನೀಯರ್ ಅಭಿಷೇಕ್, ಅರಣ್ಯ ಇಲಾಖೆ ಅಧಿಕಾರಿ ಶಿವಕುಮಾರ್ ಉಪಸ್ಥಿತರಿದ್ದರು.