ನ್ಯೂಸ್ ನಾಟೌಟ್: ಕರ್ನಾಟಕ ರಾಜ್ಯ ಸರ್ಕಾರದ ಪಡಿತರ ಯೋಜನೆಯಡಿ ಅಕ್ಕಿ, ದವಸ-ಧಾನ್ಯಗಳು ಬಡತನ ರೇಖೆಗಿಂತ ಕೆಳಗಿರುವ ಜನರಿಗೆ, ಫಲಾನುಭವಿಗಳಿಗೆ ಸಿಗಲು ಬಿಪಿಎಲ್ ನಂತಹ ಪಡಿತರ ಕಾರ್ಡ್ಗಳನ್ನು ನೀಡಿದೆ. ಆದರೆ ಈ ಬಿಪಿಎಲ್ ಕಾರ್ಡ್ಗಳು ಅರ್ಹತೆ ಇಲ್ಲದ, ಶ್ರೀಮಂತರು, ಸರ್ಕಾರಿ ಉದ್ಯೋಗ ಹೊಂದಿರುವವರು ಪಡೆದಿರುವುದು ಪತ್ತೆಯಾಗಿದೆ.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಹಣಕಾಸಿನ ಕೊರತೆ ಎದುರಿಸುತ್ತಿರುವುದರಿಂದ ನಕಲಿ ಮತ್ತು ಅನರ್ಹ ಬಿಪಿಎಲ್ ಪಡಿತರದಾರರ ಪತ್ತೆಗೆ ಸರ್ಕಾರ ಮುಂದಾಗಿದೆ.
ಇದರಲ್ಲಿ ವಾರ್ಷಿಕ 1.20 ಲಕ್ಷ ರೂಪಾಯಿಗಿಂತ ಕಡಿಮೆ ಆದಾಯ ಕುಟುಂಬಗಳಿಗೆ ಸಿಮೀತವಾದ ಪಡಿತರ ಚೀಟಿಯನ್ನು ಶ್ರೀಮಂತರು, ಉಳ್ಳವರು ಪಡೆದಿದ್ದಾರೆ. ಈ ಕುರಿತು ಅಭಿಮಾನದ ಮೂಲಕ ಪತ್ತೆ ಕಾರ್ಯ ಆರಂಭಿಸಿದೆ.
ಅಧಿಕ ಆದಾಯ ಇರುವ ಒಟ್ಟು 32,092 ಕುಟುಂಬಗಳು ಬಿಪಿಎಲ್ ಕಾರ್ಡ್ ಹೊಂದಿರುವ ಬಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ. ಇದರಲ್ಲಿ 391 ಮಂದಿ ಸರ್ಕಾರಿ ಉದ್ಯೋಗ ಹೊಂದಿರುವ ಕುಟುಂಬಗಳು ಬಿಪಿಎಲ್ ಕಾರ್ಡ್ ಪಡೆದಿದ್ದಾರೆ. ವಾರ್ಷಿಕವಾಗಿ ಲಕ್ಷಾಂತರ ರೂಪಾಯಿ ಗಳಿಸುವ 2000ಕ್ಕೂ ಹೆಚ್ಚು ಕುಟುಂಬಗಳಿವೆ. ನಿಗದಿತ ಆದಾಯ (1.20ಕ್ಕೂ) ಹೆಚ್ಚು ವಾರ್ಷಿಕ ವರಮಾನ ಹೊಂದಿರುವ 29000 ಕುಟುಂಬಗಳ ಪತ್ತೆ ಆಗಿವೆ.
391 ಮಂದಿ ಸರ್ಕಾರಿ ಅಧಿಕಾರಿಗಳು ಸರ್ಕಾರಕ್ಕೆ ಮೋಸ ಮಾಡಿದ್ದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ನಿಯಮಾನುಸಾರ ನೋಟಿಸ್ ಜಾರಿ ಮಾಡಿ, ತಂಡ ವಿಧಿಸಲು ಸೂಚಿಸಲಾಗಿದೆ.
Click