ನ್ಯೂಸ್ ನಾಟೌಟ್: ರಷ್ಯಾ ದಾಳಿ ಬಳಿಕ ಉಕ್ರೇನ್ ಗೆ ಪ್ರಧಾನಿ ನರೇಂದ್ರ ಮೋದಿ ಈ ತಿಂಗಳ(ಆಗಸ್ಟ್) ಕೊನೆಗೆ ಭೇಟಿ ನೀಡಲಿದ್ದಾರೆ.
ರಷ್ಯಾ (Russia) ಜೊತೆಗಿನ ಯುದ್ಧದ ನಂತರ ಉಕ್ರೇನ್ಗೆ (Ukraine) ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. ಆ.22 ಅಥವಾ ಆ.23 ರಂದು ಮೋದಿ ಉಕ್ರೇನ್ಗೆ ಭೇಟಿ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ. ಉಕ್ರೇನ್ ಭೇಟಿಯನ್ನು ವಿದೇಶಾಂಗ ಸಚಿವಾಲಯ (External Affairs Ministry) ಅಧಿಕೃತವಾಗಿ ತಿಳಿಸಿದ್ದು ದಿನಾಂಕ ಇನ್ನಷ್ಟೇ ಪ್ರಕಟವಾಗಬೇಕಿದೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin)ರನ್ನು ಭೇಟಿಯಾದ ಸುಮಾರು ಒಂದು ತಿಂಗಳ ನಂತರ ಉಕ್ರೇನ್ಗೆ ಭೇಟಿ ನೀಡುತ್ತಿದ್ದು, ಉಕ್ರೇನ್ಗೆ ಭೇಟಿ ನೀಡಿದ ಬಳಿಕ ಮೋದಿ ಪೋಲೆಂಡ್ ಗೆ ತೆರಳಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ 22ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಗಾಗಿ ಪುಟಿನ್ ಆಹ್ವಾನದ ಮೇರೆಗೆ ಜುಲೈ 8 ರಂದು ಎರಡು ದಿನಗಳ ಭೇಟಿಗಾಗಿ ಮಾಸ್ಕೋಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ, ಪರಮಾಣು ಶಕ್ತಿ ಮತ್ತು ಹಡಗು ನಿರ್ಮಾಣ ಸೇರಿದಂತೆ ವಿವಿಧ ವಲಯಗಳಲ್ಲಿ ಸಹಕಾರವನ್ನು ಹೆಚ್ಚಿಸಲು ಎರಡೂ ದೇಶಗಳು ಒಪ್ಪಿಕೊಂಡಿದ್ದವು.
Click