ನ್ಯೂಸ್ ನಾಟೌಟ್: ಪತ್ನಿಯ ಕಾಲುಗಳನ್ನು ಬೈಕ್ ಗೆ ಕಟ್ಟಿ, ಹೊಂಡ-ಗುಂಡಿಗಳಿದ್ದ ರಸ್ತೆಯ ಮೇಲೆ ಎಳೆದೊಯ್ದಿದ್ದು, ಆಕೆ ಸಹಾಯಕ್ಕಾಗಿ ಅಂಗಲಾಚುತ್ತಿದ್ದರೂ ಪತ್ನಿಗೆ ವಿಚಿತ್ರ ಶಿಕ್ಷೆ ನೀಡಿದ ಘಟನೆ ರಾಜಸ್ಥಾನದ ನಾಗ್ಪುರ್ ಜಿಲ್ಲೆಯಲ್ಲಿ ನಡೆದಿದೆ.
ಮಹಿಳೆ ಮೇಲೆ ಹಲ್ಲೆ ನಡೆಸಿ, ಕ್ರೂರವಾಗಿ ವರ್ತಿಸಿದ ಘಟನೆ ಒಂದು ತಿಂಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಘಟನೆ ನಡೆದ ವೇಳೆ ಸ್ಥಳದಲ್ಲಿ ಮತ್ತೊಬ್ಬ ಮಹಿಳೆ, ಪುರುಷ ಸೇರಿ ಕನಿಷ್ಠ ಮೂವರು ಮಂದಿ ಇದ್ದ ಬಗ್ಗೆ ಗೊತ್ತಾಗಿದ್ದು, ಯಾರೂ ಸಹಾಯಕ್ಕೆ ಬಂದಿಲ್ಲ.
ಸದ್ಯ ರಾಜಸ್ಥಾನದ ಈ ಘಟನೆ ಕಳವಳ ಮೂಡಿಸಿದ್ದು, ವ್ಯಕ್ತಿ ಯಾರೆಂಬ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ವರದಿ ತಿಳಿಸಿದೆ.
ಘಟನೆ ಬಗ್ಗೆ ತನಿಖೆ ನಡೆಸುವುದಾಗಿ ಸ್ಥಳೀಯ ಪೊಲೀಸರು ಪ್ರತಿಕ್ರಿಯೆ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೇಮ್ ರಾಮ್ ಮೇಘವಾಲ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.
Click