ನ್ಯೂಸ್ ನಾಟೌಟ್: ತೈವಾನ್ನ ಪೂರ್ವ ನಗರವಾದ ಹುವಾಲಿಯನ್ ನಿಂದ 34 ಕಿಮೀ ದೂರದಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ದ್ವೀಪದ ಹವಾಮಾನ ಆಡಳಿತವು ತಿಳಿಸಿದೆ.
ಭೂಕಂಪದಿಂದಾಗಿ ರಾಜಧಾನಿ ತೈಪೆ ಎಂಬಲ್ಲಿನ ಕಟ್ಟಡಗಳು ನಡುಗಿವೆ. ಭೂಕಂಪವು 9.7 ಕಿಮೀ ಆಳದಲ್ಲಿ ಸಂಭವಿಸಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಹಾನಿಗಳ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ.
ಇಲ್ಲಿನ ಪೂರ್ವ ಕರಾವಳಿಯಲ್ಲಿ ಸೋಮವಾರ ರಾತ್ರಿ ಮತ್ತು ಮಂಗಳವಾರ ಮಧ್ಯಾಹ್ನದ ನಡುವೆ ಸುಮಾರು 200ಕ್ಕೂ ಹೆಚ್ಚು ಬಾರಿ ಭೂಮಿ ಕಂಪಿಸಿದೆ ಎಂದು ತೈವಾನ್ ಕೇಂದ್ರೀಯ ಹವಾಮಾನ ಇಲಾಖೆ ತಿಳಿಸಿದೆ. ಇದೇ ಏಪ್ರಿಲ್ 3 ರಂದು 7.2 ತೀವ್ರತೆಯ ಭೂಕಂಪ ಸಂಭವಿಸಿತ್ತು. ಘಟನೆಯಲ್ಲಿ ಕನಿಷ್ಠ 14 ಜನರು ಮೃತಪಟ್ಟಿದ್ದರು.
ಇತ್ತೀಚೆಗೆ ಜಪಾನ್ ನ ದಕ್ಷಿಣ ಕರಾವಳಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿ ಸಾವು-ನೋವುಗಳು ಉಂಟಾಗಿದ್ದವು. ರಿಕ್ಟರ್ ಮಾಪಕದಲ್ಲಿ 7.1 ತೀವ್ರತೆಯ ದಾಖಲಾಗಿತ್ತು.
Click