ನ್ಯೂಸ್ ನಾಟೌಟ್: ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ನಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಲು ಅಸ್ಸಾಂನ 19 ಕಡೆ ಬಾಂಬ್ ಇಟ್ಟಿದ್ದೆವು. ಆದರೆ, ತಾಂತ್ರಿಕ ದೋಷದಿಂದ ಅವುಗಳು ಸ್ಫೋಟಗೊಂಡಿಲ್ಲ ಎಂದು ಅಸ್ಸಾಂನ ದಂಗೆಕೋರ ಗುಂಪು ಉಲ್ಫಾ ಇಂಡಿಪೆಂಡೆಂಟ್(Ulfa-I) ತಿಳಿಸಿದೆ.
ಗುವಾಹಟಿಯ 8 ಪ್ರದೇಶಗಳು ಸೇರಿದಂತೆ 19 ಸ್ಥಳಗಳಲ್ಲಿ ಬಾಂಬ್ ಇಡಲಾಗಿದೆ ಎಂದು ಬೆಳಿಗ್ಗೆ 11.30ರ ಸುಮಾರಿಗೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ದಂಗೆಕೋರರ ಗುಂಪು ತಿಳಿಸಿದೆ. ಬಾಂಬ್ ಇರಿಸಲಾಗಿರುವ ಕೆಲವು ಪ್ರದೇಶಗಳ ಚಿತ್ರಗಳನ್ನೂ ಕೂಡ ನಿಷೇಧಿತ ಸಂಘಟನೆ ಹಂಚಿಕೊಂಡಿದೆ.
ಅದರಲ್ಲಿ ಒಂದು ಪ್ರದೇಶವು ರಾಜಧಾನಿ ಗುವಾಹಟಿಯ ದಿಸ್ಪುರ್ ನ ಸರ್ಕಾರಿ ಕಾರ್ಯಾಲಯಗಳ ಬಳಿ ಇದೆ.
ಇದಕ್ಕೂ ಮೊದಲು, ಎಂದಿನಂತೆ ಸ್ವಾತಂತ್ರ್ಯ ದಿನಾಚರಣೆಯ ಬಹಿಷ್ಕಾರಕ್ಕೆ ಉಲ್ಫಾ–ಐ ಕರೆ ನೀಡಿತ್ತು. ಬೆಳಿಗ್ಗೆ 6 ರಿಂದ 12 ಗಂಟೆಯೊಳಗೆ ಬಾಂಬ್ಗಳು ಸ್ಫೋಟಗೊಳ್ಳಬೇಕಿತ್ತು ಎಂದು ಅದು ತಿಳಿಸಿದೆ.
ಅಲ್ಲದೆ, ಬಾಂಬ್ಗಳನ್ನು ತೆಗೆಯುವವರೆಗೂ ಅಥವಾ ನಿಷ್ಕ್ರಿಯಗೊಳಿಸುವವರೆಗೂ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆಯೂ ಸಂಘಟನೆ ತಿಳಿಸಿದೆ.
Click