ನ್ಯೂಸ್ ನಾಟೌಟ್: ಸುಪ್ರೀಂ ಕೋರ್ಟ್ ವಕೀಲರಾಗಿ ಬೆಳ್ತಂಗಡಿ ತಾಲೂಕಿನ ಸವಣಾಲ್ ಗ್ರಾಮದ ದೇವಸ ಮನೆಯ ಶೇಖರ್ ದೇವಸ ನೇಮಕಗೊಂಡಿದ್ದಾರೆ.
ಹಿರಿಯ ವಕೀಲರಾಗಿ ಆಯ್ಕೆಯಾಗಿರುವುದಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದಿದೆ. ಒಕ್ಕಲಿಗ ಸಮುದಾಯದಲ್ಲಿ ವಿವಿಧ ಕ್ಷೇತ್ರದಲ್ಲಿ ಹಲವಾರು ಮಂದಿ ಸಾಧಕರಿದ್ದಾರೆ. ಅನೇಕ ಸಾಧನೆಗಳನ್ನು ಮಾಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಇದೀಗ ಈ ಸಾಲಿಗೆ ಶೇಖರ್ ದೇವಸ ಕೂಡ ಸೇರಿಕೊಂಡಿದ್ದಾರೆ.