ನ್ಯೂಸ್ ನಾಟೌಟ್: ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿನಿ NCC 19 ಕರ್ನಾಟಕ ಬಟಾಲಿಯನ್ ಕೆಡೆಟ್ ತೃಪ್ತಿ. ಪಿ ಇಂಟರ್ ಗ್ರೂಪ್ ತಲ್ ಸೇನಾ ಕ್ಯಾಂಪ್ (ಟಿಎಸ್ ಸಿ)ನ ಫೈಯರಿಂಗ್ ವಿಭಾಗದಲ್ಲಿ ಅತ್ಯುತ್ತಮ ಸಾಧನೆ ಮೆರೆದಿದ್ದಾರೆ.
ಕಾರ್ಕಳದ ಜ್ಞಾನಸುಧಾ ಪಿಯು ಕಾಲೇಜಿನಲ್ಲಿ ನಡೆದ ಟಿಎಸ್ ಸಿ 1, ಶಿವಮೊಗ್ಗದ ಸಹ್ಯಾದ್ರಿ ಆರ್ಟ್ಸ್ ಅಂಡ್ ಕಾಮರ್ಸ್ ಕಾಲೇಜಿನಲ್ಲಿ ನಡೆದ ಟಿಎಸ್ ಸಿ 2 ಹಾಗೂ ಮಂಗಳೂರಿನ ಸುರತ್ಕಲ್ ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕೇಂದ್ರದಲ್ಲಿ ನಡೆದ ಟಿಎಸ್ ಸಿ 3 ರಲ್ಲಿ ತೃಪ್ತಿ ಪಾಲ್ಗೊಂಡಿದ್ದರು. ನೆಹರೂ ಮೆಮೋರಿಯಲ್ ಕಾಲೇಜಿನಿಂದ ಒಟ್ಟು ಮೂರು ಮಂದಿ ಆಯ್ಕೆಯಾಗಿದ್ರು. ಪ್ರತಿಕಾ ಫಸ್ಟ್ ಕ್ಯಾಂಪ್ , ಮಂಜುನಾಥ್ ಸೆಕೆಂಡ್ ಕ್ಯಾಂಪ್ ವರೆಗೆ ಹೋಗಿದ್ರು. ಆದರೆ ತೃಪ್ತಿ ಮೂರು ಕ್ಯಾಂಪ್ ಗಳ ತನಕ ತಲುಪಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಅವರು ಫೈಯರಿಂಗ್ ವಿಭಾಗದಲ್ಲಿ ಒಟ್ಟು 50ರಲ್ಲಿ 40 ಅಂಕವನ್ನು ಪಡೆದುಕೊಂಡಿದ್ರು. ಭವಿಷ್ಯದಲ್ಲಿ ಅವರಿಗೆ ಭಾರತೀಯ ಸೇನೆ ಕನಸು ಇದ್ದು ಅದರತ್ತ ಗಮನ ಹರಿಸಿದ್ದೇನೆ ಎಂದು ಅವರು ನ್ಯೂಸ್ ನಾಟೌಟ್ ಗೆ ತಿಳಿಸಿದರು. ಸದ್ಯ ಅವರು ನೆಹರೂ ಮೆಮೋರಿಯಲ್ ಕಾಲೇಜಿನ ಫೈನಲ್ ಇಯರ್ ಬಿಕಾಂ ವಿದ್ಯಾರ್ಥಿನಿಯಾಗಿದ್ದಾರೆ. ಇವರಿಗೆ ಲೆಫ್ಟಿನೆಂಟ್ ಸೀತಾರಾಮ್ ಮಾರ್ಗದರ್ಶನ ನೀಡಿದ್ದಾರೆ. ತೃಪ್ತಿ ಮೂಲತಃ ಗೂನಡ್ಕದ ಪೆಲ್ತಡ್ಕ ಮನೆಯವರು. ದಿವಂಗತ ಪದ್ಮನಾಭ, ಪ್ರಮೀಳಾ ದಂಪತಿಯ ಇಬ್ಬರು ಪುತ್ರಿಯರಲ್ಲಿ ಹಿರಿಯ ಮಗಳು.