ನ್ಯೂಸ್ ನಾಟೌಟ್ : ಸುಳ್ಯದ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಗಸ್ಟ್ 13 ರಂದು ಆಚರಿಸಲ್ಪಡುವ ವಿಶ್ವ ಅಂಗದಾನ ದಿನಾಚರಣೆ ಪ್ರಯುಕ್ತ ಶನಿವಾರ (ಆ.10) ಅಂಗದಾನದ ಕುರಿತು ಜಾಗೃತಿ ಮೂಡಿಸುವ ಅತಿಥಿ ಉಪನ್ಯಾಸ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಡಾ. ಲೀಲಾಧರ್ ಡಿ.ವಿ. ಉದ್ಘಾಟಿಸಿದರು. ಕಾರ್ಯಕ್ರಮದ ಸಲುವಾಗಿ ಪ್ರಸೂತಿ ತಂತ್ರ ಹಾಗೂ ಸ್ತ್ರೀ ರೋಗ ವಿಭಾಗದ ಮುಖ್ಯಸ್ಥ ಪ್ರೊಫೆಸರ್ ಡಾ. ಅಶೋಕ್ ಕೆ. ಯವರು ಅಂಗದಾನ ಮಾಡಲು ಉಪಯುಕ್ತ ಅಂಗ, ಅಂಗದಾನದ ಪ್ರಕಾರಗಳು, ಪ್ರಾಮುಖ್ಯತೆ, ಅಂಗದಾನದ ವಿಧಾನದ ಕುರಿತು ಪ್ರಾತ್ಯಕ್ಷಿಕೆ ನೀಡಿದರು.
ಕಾಲೇಜಿನ ರಚನಾ ಶಾರೀರ ವಿಭಾಗ, ಕ್ರಿಯಾ ಶಾರೀರ ವಿಭಾಗದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಯಿತು. ಮೇಧ, ಮಾಯಾ ಹಾಗೂ ಶ್ರಾವಣಿ ಪ್ರಾರ್ಥಿಸಿದರು. ರಚನಾ ಶಾರೀರ ವಿಭಾಗದ ಉಪನ್ಯಾಸಕರಾದ ಡಾ. ಅಂಜು ಎಸ್. ಸ್ವಾಗತಿಸಿ, ಕ್ರಿಯಾ ಶಾರೀರ ವಿಭಾಗದ ಡಾ. ಅನಿಷ್ಮಾ ದೇವಿ ವಂದಿಸಿದರು. ಕುಮಾರಿ ನಮೃತ ಕೆ. ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಹರ್ಷಿತಾ ಎಂ., ಸಂಸ್ಥೆಯ ಎನ್.ಎಸ್. ಎಸ್. ಘಟಕದ ಯೋಜನಾಧಿಕಾರಿ ಡಾ. ಪ್ರಮೋದ್ ಪಿ.ಎ., ಹಾಗೂ ಸಂಸ್ಥೆಯ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು, ಸ್ನಾತಕೋತ್ತರ ವಿದ್ಯಾರ್ಥಿಗಳು, ಪದವಿ ವಿದ್ಯಾರ್ಥಿಗಳು, ಹಾಗೂ ಕಲಿಕಾ ವೈದ್ಯರು ಉಪಸ್ಥಿತರಿದ್ದರು.