ನ್ಯೂಸ್ ನಾಟೌಟ್: ಬಾಂಗ್ಲಾದೇಶದಲ್ಲಿ ದಂಗೆ ಭುಗಿಲೆದ್ದಿರುವ ಸಂಧರ್ಭದಲ್ಲಿ ಹಿಂದೂ ಕ್ರಿಕೆಟಿಗ ಲಿಟನ್ ದಾಸ್ ಲಿಟನ್ ದಾಸ್ ಮನೆಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಗಳು ಹರಿದಾಡುತ್ತಿವೆ.
ಬಾಂಗ್ಲಾದೇಶದಲ್ಲಿ ಪ್ರತಿಭಟನಾಕಾರರು ನಿರಂತರವಾಗಿ ಹಿಂಸಾಚಾರ ನಡೆಸುತ್ತಿದ್ದು, ಶೇಖ್ ಹಸೀನಾ ಬೆಂಬಲಿಗರಲ್ಲದೆ, ಉಳಿದ ಹಿಂದೂಗಳ ಮನೆಗಳ ಮೇಲೂ ದಾಳಿ ನಡೆಸಲಾಗುತ್ತಿದೆ. ಈ ವೇಳೆ ಕ್ರಿಕೆಟಿಗ ಲಿಟನ್ ದಾಸ್ ಅವರ ಮನೆಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ ಎಂದು ಸುದ್ದಿ ವೈರಲ್ ಆಗಿದೆ.
ವಾಸ್ತವವಾಗಿ, ಈ ಸುದ್ದಿಯಲ್ಲಿ ಯಾವುದೇ ಸತ್ಯವಿಲ್ಲ ಎಂದು ಹೇಳಲಾಗಿದೆ . ಪ್ರತಿಭಟನಾಕಾರರು ಲಿಟನ್ ದಾಸ್ ಅವರ ಮನೆಯನ್ನು ಗುರಿಯಾಗಿಸಿಕೊಂಡಿಲ್ಲ. ಆದರೆ ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ನಾಯಕ ಮಶ್ರಫೆ ಮೊರ್ತಜಾ ಮನೆಗೆ ಬೆಂಕಿ ಹಚ್ಚಿದ್ದಾರೆ. ಮುಶ್ರಫೆ ಮೊರ್ತಜಾ ಶೇಖ್ ಹಸೀನಾ ಅವರ ಪಕ್ಷವಾದ ಬಾಂಗ್ಲಾದೇಶ ಅವಾಮಿ ಲೀಗ್ನ ಸಂಸದರಾಗಿದ್ದರು. ಇದರಿಂದ ಮುಶ್ರಫೆ ಮೊರ್ತಜಾ ಮೇಲೆ ಪ್ರತಿಭಟನಾಕಾರರ ಆಕ್ರೋಶ ಭುಗಿಲೆದ್ದಿದ್ದು ಅವರ ಮನೆಗೆ ಬೆಂಕಿ ಹಚ್ಚಲಾಗಿದೆ ಎಂಬುದು ಸ್ಪಷ್ಟವಾಗಿದೆ.
Click