ನ್ಯೂಸ್ ನಾಟೌಟ್: ಶೇಕ್ ಹಸೀನಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಬಾಂಗ್ಲಾದೇಶ ತೊರೆಯುತ್ತಿದ್ದಂತೆ ಇತ್ತ ಪ್ರತಿಭಟನಾಕಾರರು ಏಕಾಏಕಿ ನಿವಾಸಕ್ಕೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಪ್ರತಿಭಟನಾಕಾರರು ಬ್ರಾ, ಒಳ ಉಡುಪಿನಿಂದ ಹಿಡಿದು ಎಲ್ಲವನ್ನೂ ದೋಚಿದ್ದಾರೆ. ಈ ಪೈಕಿ ಓರ್ವ ಶೇಕ್ ಹಸೀನಾ ಬೆಲೆಬಾಳುವ ಸೀರೆ ಸೂಟ್ ಕೇಸ್ ಕದ್ದು ಪರಾರಿಯಾಗಿದ್ದಾನೆ. ಅನಾಗರೀಕರಂತೆ ವರ್ತಿಸಿರುವುದು ಒಂದೆಡೆ, ಆದರೆ ಈತನ ಹೇಳಿಕೆ ಮಾತ್ರ ಇದೀಗ ಬಾಂಗ್ಲಾದೇಶಕ್ಕಿಂತ ಇತರ ದೇಶಗಳಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಈ ಸೀರೆಯಿಂದ ನನ್ನ ಪತ್ನಿಯನ್ನು ಬಾಂಗ್ಲಾದೇಶ ಪ್ರಧಾನಿ ಮಾಡುತ್ತೇನೆ ಎಂದಿದ್ದಾನೆ.
ಶೇಕ್ ಹಸೀನಾ ರಾಜೀನಾಮೆ ನೀಡಿದ ಬೆನ್ನಲ್ಲೇ ಹೆಲಿಕಾಪ್ಟರ್ ಮೂಲಕ ಭಾರತದತ್ತ ಪ್ರಯಾಣ ಬೆಳೆಸಿದ್ದರು. ಇತ್ತ ಪ್ರತಿಭಟನಾಕಾರರು ಪ್ರಧಾನಿ ನಿವಾಸಕ್ಕೆ ನುಗ್ಗಿದ್ದಾರೆ. ನಿವಾಸದಲ್ಲಿದ್ದ ಆಹಾರ, ಖಾದ್ಯಗಳನ್ನು ಸವಿದಿದ್ದಾರೆ. ಪ್ರಧಾನಿ ಬೆಡ್ ಮೇಲೆ ಕುಳಿತು ವಿಶ್ರಾಂತಿ ಪಡೆದಿದ್ದಾರೆ. ಹಲವರು ನಿವಾಸದಲ್ಲಿನ ಮೀನುಗಳನ್ನು ಕದ್ದೊಯ್ದಿದ್ದಾರೆ. ಬೆಲೆ ಬಾಳುವ ವಸ್ತು ಸೇರಿದಂತೆ ಎಲ್ಲವನ್ನೂ ದೋಚಿದ್ದಾರೆ. ಈ ಪೈಕಿ ಶೇಕ್ ಹಸೀನಾ ಅವರ ಬ್ರಾ, ಒಳ ಉಡುಪುಗಳನ್ನು ಪ್ರತಿಭಟನಾಕಾರರು ದೋಚಿದ್ದಾರೆ. ಇದೇ ವೇಳೆ ಒರ್ವ ತಲೆ ಮೇಲೆ ದೊಡ್ಡ ಸೂಟ್ಕೇಸ್ ಹೊತ್ತುಕೊಂಡು ಹೊರಬಂದಿದ್ದಾನೆ.
ಸೂಟ್ಕೇಸ್ ಹೊತ್ತುಕೊಂಡೇ ಪ್ರತಿಕ್ರಿಯೆ ನೀಡಿದ್ದಾರೆ. ವಿಡಿಯೋ ಮಾಡುತ್ತಿದ್ದಾತ, ಈ ಸೂಟ್ಕೇಸ್ನಲ್ಲಿ ಏನಿದೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಆತ, ಇದು ಶೇಕ್ ಹಸೀನಾ ಅವರ ಸೀರೆ. ಈ ಸೀರೆ ತೆಗೆದುಕೊಂಡು ಹೋಗಿ ಏನು ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಇದು ಬಾಂಗ್ಲಾದೇಶ ಪ್ರಧಾನಿಯ ಸೀರೆಗಳು, ಈ ಸೀರೆಯನ್ನು ನನ್ನ ಪತ್ನಿಗೆ ನೀಡುತ್ತೇನೆ. ಆಕೆಯನ್ನು ಮುಂದಿನ ಬಾಂಗ್ಲಾದೇಶ ಪ್ರಧಾನಿ ಮಾಡುತ್ತೇನೆ ಎಂದಿದ್ದಾನೆ. ಈಗ ಬಾಂಗ್ಲಾದಲ್ಲಿ ಹರಾಜಕತೆ ಉಂಟಾಗಿದ್ದು, ಸೇನಾಡಳಿತ ಜಾರಿಯಾಗಿದೆ ಎಂದು ವರದಿ ತಿಳಿಸಿದೆ.
Click