ನ್ಯೂಸ್ ನಾಟೌಟ್: ಕೊಡಗು ಜಿಲ್ಲೆಯ ಊರುಬೈಲಿನಲ್ಲಿ ಪ್ರತಿ ದಿನವೂ ಒಂಟಿ ಆನೆಯೊಂದರ ಉಪಟಳ ಸ್ಥಳೀಯ ಜನರನ್ನು ಹೈರಾಣಾಗಿಸಿ ಬಿಟ್ಟಿದೆ.
ಕಳೆದ ಕೆಲವು ತಿಂಗಳಿನಿಂದ ಕೃಷಿಕರಿಗೆ ಈ ಆನೆಯಿಂದ ನಿತ್ಯ ರೋಧನ ಶುರುವಾಗಿದೆ. ಇಷ್ಟೆಲ್ಲ ಆಗುತ್ತಿದ್ದರೂ ಅರಣ್ಯ ಇಲಾಖೆ ಮಾತ್ರ ದಿವ್ಯ ಮೌನವಹಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಊರುಬೈಲು ನಿವಾಸಿ ಧರ್ಮೊಪಾಲ ಅವರ ತೋಟಕ್ಕೆ ಆನೆ ನುಗ್ಗಿದ್ದು ಅಪಾರ ಕೃಷಿ ಚಟುವಟಿಕೆಯನ್ನು ಹಾನಿ ಮಾಡಿದೆ. ಹಲವು ಸಲ ಈ ಬಗ್ಗೆ ದೂರು ನೀಡಿದರೂ ಸ್ಥಳೀಯ ಚುನಾಯಿತ ಪ್ರತಿನಿಧಿಗಳಾಗಲಿ ಅಥವಾ ಅರಣ್ಯ ಇಲಾಖೆಯಾಗಲಿ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ಸ್ಥಳೀಯರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.