ನ್ಯೂಸ್ ನಾಟೌಟ್: ಜಗತ್ತಿನಲ್ಲಿ ಹಲವಾರು ವಿಸ್ಮಯಗಳು ನಡೆಯುತ್ತಿರುತ್ತವೆ. ದೇಶದ ಕೆಲವೊಂದು ಭಾಗದ ಆಚಾರ-ವಿಚಾರಗಳನ್ನು ಇಂದಿನ ಜನತೆ ಒಪ್ಪಲು ಸಾಧ್ಯವಿಲ್ಲದಿದ್ದರೂ ಅಲ್ಲಿನ ಸಂಪ್ರದಾಯ, ಆಚರಣೆಗಳು ಇಂದಿಗೂ ಮುಂದುವರಿಯುತ್ತಿದೆ. ಬುಡಕಟ್ಟು ಜನರ ಜೀವನವೇ ವಿಚಿತ್ರ. ಇವರ ಆಹಾರ ಪದ್ಧತಿ, ಸಂಪ್ರದಾಯಗಳನ್ನು ತಿಳಿದುಕೊಳ್ಳುವಾಗ ಕೆಲವೊಂದು ವಿಚಿತ್ರ ಅಂಶಗಳಿವೆ. ಇಂಥ ಬುಡಕಟ್ಟು ಸಮುದಾಯ ಭಾರತದಲ್ಲಿಯೂ ಇದೆ.
ರಾಜಸ್ಥಾನ ಮತ್ತು ಗುಜರಾತ್ನ ಭಾಗಗಳಲ್ಲಿ ಹೆಚ್ಚಾಗಿ ಕಂಡುಬರುವ ಗರಾಸಿಯಾ ಬುಡಕಟ್ಟಿನ ಜನರಲ್ಲಿ ಲಿವ್ ಇನ್ ಸಂಬಂಧಗಳು ತುಂಬಾ ಸಾಮಾನ್ಯವಾಗಿದೆ. ಈ ಬುಡಕಟ್ಟಿನ ಹೆಣ್ಣು ಮಕ್ಕಳು ಮದುವೆಗೆ ಮುಂಚೆಯೇ ತಾಯಿಯಾಗುತ್ತಾರೆ. ಹುಡುಗ ಇಷ್ಟವಾದರೆ ಮದುವೆಯಾಗಿ ವೈವಾಹಿಕ ಜೀವನವನ್ನೂ ಆರಂಭಿಸುತ್ತಾರೆ.
ಗರಾಸಿಯಾ ಬುಡಕಟ್ಟಿನಲ್ಲಿ ಈ ಸಂಪ್ರದಾಯವೊಂದು ಜಾರಿಗೆ ಬರಲು ವಿಚಿತ್ರ ಕಾರಣವಿದೆ. ಕೆಲವು ವರ್ಷಗಳ ಹಿಂದೆ ಈ ಬುಡಕಟ್ಟಿನ ನಾಲ್ವರು ಸಹೋದರರು ಬೇರೆಡೆ ವಾಸಿಸಲು ಹೋಗಿದ್ದರು. ನಾಲ್ವರಲ್ಲಿ ಮೂವರು ಮೊದಲು ಮದುವೆಯಾಗಿ ಸಂಸಾರ ಆರಂಭಿಸಿದರೆ, ಓರ್ವ ಮಾತ್ರ ಮದುವೆಯಾಗದೆ ಲಿವ್-ಇನ್ ಸಂಬಂಧದಲ್ಲಿದ್ದ. ಆದರೆ ಮದುವೆಯಾಗಿದ್ದ ಮೂವರಿಗೆ ಮಕ್ಕಳಾಗಲಿಲ್ಲ. ಆದರೆ ಮದುವೆಯಾಗದೇ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದವನಿಗೆ ಮಾತ್ರ ಮಗು ಆಯಿತಂತೆ. ಅಂದಿನಿಂದ ಈ ಸಮುದಾಯದಲ್ಲಿ ಲಿವ್ ಇನ್ ಸಂಬಂಧ ಹಾಗೂ ಮದುವೆಗೂ ಮೊದಲು ತಾಯಿಯಾಗುವ ಸಂಪ್ರದಾಯವೊಂದು ಹುಟ್ಟಿಕೊಂಡಿದೆ ಎನ್ನಲಾಗಿದೆ.
ಮದುವೆಗಾಗಿ ಜಾತ್ರೆ..!
ಈ ಬುಡಕಟ್ಟಿನಲ್ಲಿ ಮದುವೆಗಾಗಿ ಎರಡು ದಿನಗಳ ಕಾಲ ಜಾತ್ರೆ ನಡೆಯುತ್ತದೆ. ಮೇಳದಲ್ಲಿ ಹೆಚ್ಚಿನ ಸಂಖ್ಯೆಯ ಯುವಕ ಮತ್ತು ಯುವತಿಯರು ಭಾಗಿಯಾಗುತ್ತಾರೆ. ಈ ಮೇಳವನ್ನು ಸಂಗಾತಿಯ ಆಯ್ಕೆಗಾಗಿ ಆಯೋಜಿಸಲಾಗುತ್ತದೆ. ಈ ಮೇಳದಲ್ಲಿ ಹುಡುಗಿಗೆ ಯಾರಾದ್ರೂ ಹುಡುಗ ಇಷ್ಟವಾದರೆ ಆತನ ಜೊತೆಗೆ ಲಿವ್ ಇನ್ ರಿಲೇಷನ್ಶಿಪ್ ನಲ್ಲಿ ಇರಬಹುದು. ಇಷ್ಟವಾಗುವ ಹುಡುಗನ ಜೊತೆಗೆ ಲೈಂಗಿಕ ಕ್ರಿಯೆ ನಡೆಸಿ ಮಗುವನ್ನು ಪಡೆಯಬಹುದು. ಆ ನಂತರದಲ್ಲಿ ಇಬ್ಬರಿಗೂ ಒಪ್ಪಿಗೆ ಇದ್ದರೆ ಹೆತ್ತವರು ಜೊತೆ ಸೇರಿ ಮಕ್ಕಳ ಮದುವೆ ಮಾಡುತ್ತಾರೆ. ಈ ವಿಚಿತ್ರ ಸಂಪ್ರದಾಯವನ್ನು ಮುಂದುವರಿದ ಸಮಾಜ ಒಪ್ಪಲು ಸಾಧ್ಯವಿಲ್ಲದಿದ್ದರೂ ಈ ಬುಡಕಟ್ಟು ಸಮುದಾಯದವರು ಇಂದಿಗೂ ಆಚರಿಸಿಕೊಂಡು ಬರುತ್ತಿದ್ದಾರೆ.