ನ್ಯೂಸ್ ನಾಟೌಟ್: ಘಟಪ್ರಭಾ ನದಿಯ (Ghataprabha River) ಅಬ್ಬರಕ್ಕೆ ಗೋಕಾಕ್ (Gokak) ತಾಲೂಕಿನ ಮೆಳವಂಕಿ ಗ್ರಾಮದಲ್ಲಿರುವ ಸುಮಾರು 800 ಮನೆಗಳು ಜಲಾವೃತವಾಗಿದ್ದು, ಸಂಪೂರ್ಣ ಊರೇ ಮುಳುಗಿಹೋಗಿದೆ.
ಮನೆಗಳಲ್ಲಿ 80% ನೀರು ತುಂಬಿ ಜನರು ಆತಂಕದಲ್ಲಿದ್ದಾರೆ. ಮನೆಗಳ ಅರ್ಧದಷ್ಟು ಭಾಗ ನೀರಿನಲ್ಲಿ ಮುಳುಗಿದೆ. ನಡು ರಸ್ತೆಯಲ್ಲಿಯೇ ಸೊಂಟದ ಮಟ್ಟದವರೆಗೆ ನೀರು ನಿಂತಿದೆ. 2019, 2021ರಲ್ಲೂ ಸಹ ಮುಳುಗಿ ಮೆಳವಂಕಿ ಗ್ರಾಮ ನಡು ಗಡ್ಡೆಯಂತಾಗಿತ್ತು. ಇಡೀ ಗ್ರಾಮಕ್ಕೆ ನುಗ್ಗಿದ್ದ ಘಟಪ್ರಭಾ ನದಿ ನೀರು ನುಗ್ಗಿದ ಕಾರಣ ಹೊಲ, ಗದ್ದೆ, ದೇವಸ್ಥಾನ, ಮನೆಗಳು ನೀರಿನಿಂದಾವೃತಗೊಂಡಿವೆ.
Click