ನ್ಯೂಸ್ ನಾಟೌಟ್: ನಿಫಾ ವೈರಸ್ ಗೆ ತುತ್ತಾಗಿದ್ದ ಕೇರಳದ ರೋಗಿಯನ್ನ ಆರೈಕೆ ಮಾಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಮೂಲದ ನರ್ಸ್ ವೊಬ್ಬರು ಕಳೆದ ಎಂಟು ತಿಂಗಳಿನಿಂದ ನಿಫಾ ವೈರಸ್ ಗೆ ತುತ್ತಾಗಿ ಕೋಮಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಮರ್ದಾಳ ಬಳಿಯ ತುಂಬ್ಯ ನಿವಾಸಿ 24 ವರ್ಷದ ಟಿಟ್ಟೋ ತೋಮಸ್ ಕೋಮಾಗೆ ಜಾರಿದವರಾಗಿದ್ದಾರೆ. ಇವರು ಬಿಎಸ್ಸಿ ನರ್ಸಿಂಗ್ ಪದವೀಧರರಾಗಿದ್ದಾರೆ. ಟಿಟ್ಟೋ ತೋಮಸ್ ಕೇರಳದ ಕ್ಯಾಲಿಕಟ್ ನಲ್ಲಿರುವ ಇಕ್ರಾ ಇಂಟರ್ ನ್ಯಾಷನಲ್ ಹಾಸ್ಪಿಟಲ್ ಅಂಡ್ ರಿಸರ್ವ್ ಸೆಂಟರ್ ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ.
Click