ಪುತ್ತೂರು: ಈಶ್ವರಮಂಗಲದ ಅವಿವಾಹಿತ ಯುವಕನೋರ್ವ ಹೃದಯಾಘಾತದಿಂದ ನಿಧನರಾಗಿರುವ ಘಟನೆ ಎ.18ರಂದು ನಡೆದಿದೆ. ಈಶ್ವರಮಂಗಲ ಸಮೀಪದ ಮುಗುಳಿ ನಿವಾಸಿ ಮಹಮ್ಮದ್ ಎಂಬವರ ಪುತ್ರ ಉಮ್ಮರ್ ಸಿ.ಎಚ್(28.ವ) ಮೃತಪಟ್ಟವರು.
ವಿದೇಶದಲ್ಲಿ ಉದ್ಯೋಗದಲ್ಲಿದ್ದ ಉಮ್ಮರ್ ಸಿ.ಎಚ್ ಅವರು ಇತ್ತೀಚೆಗೆ ತನ್ನ ಅಣ್ಣನ ಜೊತೆ ಬೆಂಗಳೂರಿಗೆ ತೆರಳಿದ್ದರು. ಎ.17ರಂದು ರಾತ್ರಿ ಬೆಂಗಳೂರಿನಿಂದ ಊರಿಗೆ ಬಸ್ ನಲ್ಲಿ ಹೊರಟಿದ್ದ ಉಮ್ಮರ್ ಸಿ.ಎಚ್ ಅವರು ಬೆಳಗ್ಗೆ ಪುತ್ತೂರು ತಲುಪಿದ್ದರು. ಈ ವೇಳೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮನೆಯವರು ಪುತ್ತೂರು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದರಾದರೂ ಆ ವೇಳೆಗಾಗಲೇ ಅವರು ಕೊನೆಯುಸಿರೆಳೆದಿದ್ದರು. ಮೃತರು ತಂದೆ , ತಾಯಿ ಝೈನಬಾ, ಸಹೋದರರಾದ ಹಮೀದ್ ಸಿ.ಎಚ್, ಯೂಸುಫ್ ಸಿ.ಎಚ್, ಅಝೀಝ್ ಸಿ.ಎಚ್, ಉಸ್ಮಾನ್ ಸಿ.ಎಚ್ ಹಾಗೂ ಅಲಿ ಸಿ.ಎಚ್ ಅವರನ್ನು ಅಗಲಿದ್ದಾರೆ.