ನ್ಯೂಸ್ ನಾಟೌಟ್: ನಿಟ್ಟೂರು ಮತ್ತು ಸಂಪಿಗೆ ರೋಡ್ ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್-64ರ ರಸ್ತೆ ಕೆಳಸೇತುವೆಗೆ ತಾತ್ಕಾಲಿಕ ಗರ್ಡರ್ಗಳನ್ನು ಅಳವಡಿಸುವ ಮತ್ತು ತೆಗೆದುಹಾಕಲು ಅಗತ್ಯ ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಸಲುವಾಗಿ, ರಾಜ್ಯದ ಹಲವು ರೈಲುಗಳನ್ನು, ಭಾಗಶಃ ರದ್ದು, ಮಾರ್ಗ ಬದಲಾವಣೆ,(Railway) ನಿಯಂತ್ರಣ ಮತ್ತು ಸಮಯ ಮರುನಿಗದಿ ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ವಲಯ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
8 ರೈಲುಗಳ ಸಂಚಾರ ರದ್ದು ಈ ಕೆಳಗಿನ ರೈಲುಗಳ ಸಂಚಾರ ಆಗಸ್ಟ್ 8 ಮತ್ತು 15 ರಂದು ತಾತ್ಕಾಲಿಕವಾಗಿ 2 ದಿನ ಸ್ಥಗಿತವಾಗಲಿದೆ.
ರೈಲು ಸಂಖ್ಯೆ 07346 ತುಮಕೂರು-ಚಾಮರಾಜನಗರ ಡೈಲಿ ಪ್ಯಾಸೆಂಜರ್ ಸ್ಪೆಷಲ್.
ರೈಲು ಸಂಖ್ಯೆ 07328 ಚಾಮರಾಜನಗರ-ಮೈಸೂರು ಡೈಲಿ ಪ್ಯಾಸೆಂಜರ್ ಸ್ಪೆಷಲ್.
ರೈಲು ಸಂಖ್ಯೆ 16239 ಚಿಕ್ಕಮಗಳೂರು-ಯಶವಂತಪುರ ಡೈಲಿ ಎಕ್ಸ್ಪ್ರೆಸ್.
ರೈಲು ಸಂಖ್ಯೆ 16240 ಯಶವಂತಪುರ-ಚಿಕ್ಕಮಗಳೂರು ಡೈಲಿ ಎಕ್ಸ್ಪ್ರೆಸ್.
ರೈಲು ಸಂಖ್ಯೆ, 06576 ತಮಕೂರು-ಕೆಎಸ್ಆರ್ ಬೆಂಗಳೂರು ಮೆಮು ಸ್ಪೆಷಲ್.
ರೈಲು ಸಂಖ್ಯೆ 06575 KSR ಬೆಂಗಳೂರು-ತುಮಕೂರು ಮೆಮು ಸ್ಪೆಷಲ್
ರೈಲು ಸಂಖ್ಯೆ 16579 ಯಶವಂತಪುರ-ಶಿವಮೊಗ್ಗ ಟೌನ್ ಇಂಟರ್ಸಿಟಿ ಡೈಲಿ ಎಕ್ಸ್ಪ್ರೆಸ್.
ರೈಲು ಸಂಖ್ಯೆ 16580 ಶಿವಮೊಗ್ಗ ಟೌನ್-ಯಶವಂತಪುರ ಇಂಟರ್ಸಿಟಿ ಡೈಲಿ ಎಕ್ಸ್ಪ್ರೆಸ್.
ಬೆಂಗಳೂರಿನಿಂದ ಧಾರವಾಡ, ಚಾಮರಾಜನಗರ, ತುಮಕೂರು, ಮೈಸೂರು, ಶಿವಮೊಗ್ಗಕ್ಕೆ ಹೊರಡುವ ರೈಲುಗಳು ಈ ಎರಡು ದಿನ ರದ್ದು, ಭಾಗಶಃ ರದ್ದಾಗಲಿವೆ ಎಂದು ನೈಋತ್ಯ ರೈಲ್ವೆ ವಲಯ ಮಾಧ್ಯಮ ಪ್ರಕಟಣೆ ಹೊರಡಿಸಿದೆ.