ನ್ಯೂಸ್ ನಾಟೌಟ್: ಕುಮಾರಧಾರ ನದಿಯಲ್ಲಿ ಇದೀಗ (ಜು.19) ಶವ ಪತ್ತೆಯಾಗಿದೆ. ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕಾಣಿಯೂರು ಕುದ್ಮಾರಿನ ಸಂತೋಷ್ (38 ವರ್ಷ) ಎಂದು ತಿಳಿದು ಬಂದಿದೆ.
ಆತ ಮಾನಸಿಕ ಅಸ್ವಸ್ಥನಾಗಿದ್ದ ಎಂದು ಹೇಳಲಾಗಿದೆ. ಶವ ಮೇಲೆತ್ತಲು ಮುಳುಗು ತಜ್ಞರು ಸ್ಥಳಕ್ಕೆ ಆಗಮಿಸಿದ್ದಾರೆ. ಕುಮಾರಧಾರ ನದಿ ಮಳೆಯಿಂದ ತುಂಬಿ ಹರಿಯುತ್ತಿದೆ. ಹೀಗಾಗಿ ಶವ ಮೇಲಕೆತ್ತುವುದು ತುಸು ಸವಾಲಿನ ಕೆಲಸವಾಗಿದೆ ಎನ್ನಲಾಗಿದೆ.