ನ್ಯೂಸ್ ನಾಟೌಟ್: ಮಳೆಗಾಲದಲ್ಲಿ ದೇಹ ಪ್ರಕೃತಿಯಲ್ಲಿ ಕೆಲವೊಂದು ರೀತಿಯ ಬದಲಾವಣೆಗಳಾಗುತ್ತವೆ. ಇದರಿಂದ ಮುಂದಿನ ದಿನಗಳಲ್ಲಿ ಆರೋಗ್ಯ ಸಮಸ್ಯೆಗಳು ಕಂಡು ಬರುವ ಸಾಧ್ಯತೆಗಳಿವೆ. ಆದ್ದರಿಂದ ಇಂತಹ ಸಮಸ್ಯೆಗಳಿಂದ ಆರೋಗ್ಯವನ್ನು ಯಾವ ರೀತಿ ರಕ್ಷಣೆ ಮಾಡಬಹುದು..? ಮುನ್ನೆಚ್ಚರಿಕ ಕ್ರಮಗಳೇನು..?
ಆಟಿ ತಿಂಗಳುಗಳಲ್ಲಿ ಸರಿಯಾದ ಪತ್ಯಾಹಾರಗಳನ್ನು ಪಾಲಿಸಿಕೊಂಡು ಪಂಚಕರ್ಮ ಚಿಕಿತ್ಸೆ ಪಡೆದುಕೊಳ್ಳುವ ಬಗ್ಗೆ ಆಯುರ್ವೇದದಲ್ಲಿ ಸಂಕ್ಷಿಪ್ತವಾಗಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಜುಲೈ 18ರಿಂದ ಆಗಸ್ಟ್ 16ರವರೆಗೆ ವಿಶೇಷ ಶಿಬಿರ ಆಯೋಜಿಸಲಾಗಿದೆ.
ಈ ಚಿಕಿತ್ಸೆ ವಿಧಾನದಿಂದ ದೇಹ ಶುದ್ಧಿಯಾಗುತ್ತದೆ. ಅಲ್ಲದೇ ರೋಗನಿರೋಧಕ ಶಕ್ತಿಯನ್ನು ವೃದ್ಧಿಯಾಗಿ ದೇಹದಲ್ಲಿರುವ ದೋಷಗಳನ್ನು ನಿವಾರಣೆಯಾಗುತ್ತದೆ. ತಾರುಣ್ಯ ವೃದ್ಧಿಯಾಗಿ ವಯಸ್ಸಾಗುವುದನ್ನು ವಿಳಂಬಗೊಳಿಸುತ್ತದೆ.
ಶಿಬಿರದಲ್ಲಿ ವಿಶೇಷವಾಗಿ ಅಭ್ಯಂಗ (ಎಣ್ಣೆ ಸ್ನಾನ) ವಿವಿಧ ಸ್ವೇಧನಗಳು(ಸ್ಟೀಮ್ ಬಾತ್) ಶಿರೋಧಾರ ಹಾಗೂ ಲೇಪ ಮೊದಲಾದ ವಿಶೇಷ ಚಿಕಿತ್ಸೆಗಳನ್ನು ನೀಡಲಾಗುವುದು. ಶಿಬಿರದಲ್ಲಿ ಒಳ ರೋಗಿಗಳಿಗೆ ಆಟಿ ವಿಶೇಷ ಆಹಾರಗಳಾದ ಕರ್ಕಾಟಕ ಗಂಜಿ (ವಿಶೇಷ ಔಷಧೀಯ ಗಂಜಿ) ಮೊದಲಾದವುಗಳನ್ನು ನೀಡಲಾಗುವುದು. ಶಿಬಿರ ಇಂದು (ಜುಲೈ 18) ಆರಂಭಗೊಂಡಿದ್ದು, ಆಗಸ್ಟ್ 16ರವರೆಗೆ ನಡೆಯಲಿದೆ. ಶಿಬಿರದ ಬಗ್ಗೆ ಹೆಚ್ಚಿನ ಮಾಹಿತಿಗೆ 7353756066, 9901140833 ಸಂಪರ್ಕಿಸಬಹುದು.