ನ್ಯೂಸ್ ನಾಟೌಟ್: ಚಲಿಸುತ್ತಿದ್ದ ಕಾರಿನ ಟೈರ್ ಬ್ಲಾಸ್ಟ್ ಗೊಂಡ ಪರಿಣಾಮ ಕಾರು ಹತ್ತು ಅಡಿ ಆಳದ ಗುಂಡಿಗೆ ಬಿದ್ದಿರುವ ದುರ್ಘಟನೆ ಇದೀಗ (ಜು.18) ಸುಳ್ಯ ಸಮೀಪದ ಪೆರಾಜೆಯ ಬಳಿಯಿಂದ ವರದಿಯಾಗಿದೆ.
ಕಾಸರಗೋಡಿನಿಂದ ಹೊರಟಿದ್ದ ಕಾರು ಪೆರಾಜೆ ಸಮೀಪದ ಮಸೀದಿ ತಲುಪುತ್ತಿದ್ದಂತೆ ಇದ್ದಕ್ಕಿದ್ದಂತೆ ಇನ್ನೋವಾ ಕಾರಿನ ಟೈರ್ ಬ್ಲಾಸ್ಟ್ ಆಗಿದೆ. ಕಾರು ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದಿದೆ.
ಕಾರಿನೊಳಗಿದ್ದ ಮೂವರಿಗೆ ಗಾಯವಾಗಿದೆ. ಅವರನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ದುರ್ಘಟನೆಯಲ್ಲಿ ಕಾರು ಜಖಂಗೊಂಡಿದೆ.