ಮಡಿಕೇರಿ: ಕೊಡಗಿನಲ್ಲಿ ಇತ್ತೀಚೆಗೆ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಇದರಿಂದಾಗಿ ಹಲವು ಕಡೆ ಜನರು ಜೀವ ಕೈಯಲ್ಲಿ ಹಿಡಿದುಕೊಂಡೇ ಒಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಇಂದು ವಿರಾಜಪೇಟೆಯ ಹೊ ರ ವಲಯದ ಕರಡ ಗ್ರಾಮ ವ್ಯಾಪ್ತಿಯಲ್ಲಿ ಸ್ಥಳೀ ಯ ನಿವಾಸಿ ಸೋ ಮಪ್ಪ ಎಂಬುವವರ ಮನೆ ಬಳಿ ಸುಳಿದ ಒಂಟಿ ಸಲಗ ಮನೆ ಎದುರು ನಿಲ್ಲಿಸಿದ ಪಿಕ್ ಅಪ್ ವಾಹನದ ಮೇಲೆ ದಾಳಿ ಮಾಡಿದೆ. ಅದೃಷ್ಟವಶಾತ್ ಸಾಕು ನಾಯಿಗಳು ಬೊಗಳಿದ ಪರಿಣಾಮ ಪಿಕ್ ಅಪ್ ನ್ನು ಅಲುಗಾಡಿಸಿ ನಂತರ ಕಾಲ್ಕಿತ್ತಿದೆ. ಇಲ್ಲದಿದ್ದರೆ ವಾಹನವನ್ನು ಮಗುಚಿ ಹಾಕುತ್ತಿತ್ತು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಸುತ್ತಮುತ್ತಲ ತೋಟಗಳಲ್ಲಿ ಒಂಟಿ ಸಲಗ ದಾಂಧಲೆ ನಡೆಸಿದ್ದು, ಅಪಾರ ನಷ್ಟ ಉಂಟಾಗಿದೆ. ಗ್ರಾಮಸ್ಥರು ಓಡಾಡುವುದಕ್ಕೂ ಭಯ ಪಡುತ್ತಿದ್ದು, ಅರಣ್ಯ ಇಲಾಖೆ ತಕ್ಷಣ ಸೂಕ್ತಕ್ರಮ ಕೈಗೊ ಳ್ಳಬೇಕೆಂದು ಒತ್ತಾಯಿಸಿದ್ದಾರೆ.