ವಾಲ್ತಾಜೆ: ಇಲ್ಲಿನ ದೇವಚಳ್ಳ ಗ್ರಾಮದ ವಾಲ್ತಾಜೆ ಶಾಲಾ ಎಸ್.ಡಿ.ಎಂ.ಸಿ ಮತ್ತು ಹಳೆ ವಿದ್ಯಾರ್ಥಿ ಸಂಘ ವತಿಯಿಂದ ಶಾಲಾ ಆಟದ ಮೈದಾನದ ವಿಸ್ತರಣೆಯ ಅಂಗವಾಗಿ ದಿನಾಂಕ 10-04-2022 ರ ಆದಿತ್ಯವಾರದಂದು ಆಹ್ವಾನಿತ ತಂಡಗಳ ಸೂಪರ್ ಸಿಕ್ಸ್ ಕ್ರಿಕೆಟ್ ಟೂರ್ನಿ ನಡೆಯಿತು.
ಪಂದ್ಯಾಟದಲ್ಲಿ ಗೆದ್ದ ಬಹುಮಾನದಲ್ಲಿ ಶಾಲೆಗೆ ದೇಣಿಗೆ ನೀಡುವ ಮೂಲಕ ಮಾದರಿಯಾದ ಯಂಗ್ ಫ್ರೆಂಡ್ಸ್ ಬೂಡು ಮರ್ಕಂಜ ತಂಡ. ಆಟದ ಮೈದಾನ ಇಲ್ಲದ ಊರಿಗೆ ಶಾಲಾ ಹಳೆ ವಿದ್ಯಾರ್ಥಿ ಸಂಘದ ರಚನೆ ಮಾಡಿ ಸಾರ್ವಜನಿಕ ಸಹಕಾರದಿಂದ ಹಂತ ಹಂತವಾಗಿ ಆಟದ ಮೈದಾನ ವಿಸ್ತರಣೆ ಕಾರ್ಯ ಪ್ರಾರಂಭಿಸಿ, ಶಾಲಾ ಎಸ್ ಡಿ.ಎಂ ಸಿ . ಅಧ್ಯಕ್ಷನಾಗಿ ಕೂಡ ಸಂಪೂರ್ಣ ಆಟದ ಮೈದಾನ ವಿಸ್ತರಣೆ ಮೂಲಕ ಚಂದ್ರಶೇಖರ ಕಡೋಡಿ ಸಾರ್ವಜನಿಕ ಸೇವೆ ಅವಿಸ್ಮರಣೀಯ ಕಾರ್ಯ ಎಂದು ಅತಿಥಿಗಳು ಶ್ಲಾಘಿಸಿದರು. ಕಾರ್ಯಕ್ರಮ ಉದ್ಘಾಟನೆಯನ್ನು ರಾಜಾ ದೈವ ಪುರುಷ ದೈವ ದೇವಸ್ಥಾನದ ಅಧ್ಯಕ್ಷ ಕಾಳಿಕಾ ಪ್ರಸಾದ್ ಮುಂಡೋಡಿ ನೆರವೇರಿಸಿದರು. ಶಾಲಾ ಉಪಾಧ್ಯಕ್ಷೆ ಪುಷ್ಪದಾಮೋದರ ಮೀನಾಜೆ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪಂಚಾಯತ್ ಸದಸ್ಯ ಭವಾನಿಶಂಕರ್ ಮುಂಡೋಡಿ, ಶೇಷಪ್ಪ ಗೌಡ ಕೊರಂಬಡ್ಕ, ರಂಜಿತ್ ಕಡ್ಲಾರು,ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಲೋಚನಾ ದೇವ, ದೇವಚಳ್ಳ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಸಂತೋಷ್, ಶಾಲಾ ಮುಖ್ಯೋಪಾಧ್ಯಾಯ ನಂದನ್. ಕೆ. ಸಿ., ಜಲಶ್ರೀ ಪ್ರತಿಷ್ಠಾನ ಅಧ್ಯಕ್ಷ ನಿರಂಜನ್ ಕಡ್ಲಾರು, ಯುವ ಸೇವಾ ಮತ್ತು ಕ್ರೀಡಾ ಸಂಘದ ಅಧ್ಯಕ್ಷರಾದ ದಾಮೋದರ ಮೀನಾಜೆ, ಮೀನಾಕ್ಷಿ ಉಮೇಶ್ ಮುಂಡೋಡಿ, ಹೇಮಲತಾ ಬಲ್ಕಜೆ, ವಿನಯಚಂದ್ರ ಮಾಡಬಾಗಿಲು, ರವಿಕುಮಾರ್ ಮಡಪ್ಪಾಡಿ ಉಪಸ್ಥಿತರಿದ್ದರು. ಸುಕುಮಾರ್ ಕಂದ್ರಪ್ಪಾಡಿ ಕಾರ್ಯಕ್ರಮ ನಿರೂಪಣೆ ಮತ್ತು ಕ್ರಿಕೆಟ್ ಪಂದ್ಯಾಟದ ವೀಕ್ಷಕ ವಿವರಣೆ ನೀಡಿದರು. ಪಂದ್ಯಾಟದಲ್ಲಿ ಬ್ರದರ್ಸ್ ಬಾಕಿಲ ಪ್ರಥಮ, ಯಂಗ್ ಫ್ರೆಂಡ್ಸ್ ಬೂಡು ಮರ್ಕಂಜ ದ್ವಿತೀಯ, ವಾಲ್ತಾಜೆ ಯುವ ಸೇವಾ ಮತ್ತು ಕ್ರೀಡಾ ಸಂಘ ತೃತೀಯ ಮತ್ತು ವೀರಕೇಸರಿ ಮಿತ್ರ ಬಳಗ ಮರ್ಕಂಜ ಚತುರ್ಥ ಬಹುಮಾನ ಪಡೆಯಿತು. ಪಂದ್ಯಾಟದ ಅತ್ಯುತ್ತಮ ದಾಂಡಿಗನಾಗಿ ಸವದ್ ಬಾಕಿಲ, ಉತ್ತಮ ಎಸೆತಗಾರನಾಗಿ ಲತೀಫ್ ಬಾಕಿಲ, ಉತ್ತಮ ಗೂಟರಕ್ಷಕನಾಗಿ ಗಿರೀಶ್ ಬೂಡು ಮರ್ಕಂಜ, ಉತ್ತಮ ಕ್ಷೇತ್ರರಕ್ಷಕನಾಗಿ ರಂಜಿತ್ ಕಡ್ಲಾರು ಮತ್ತು ಸರ್ವಾಂಗೀಣ ಆಟಗಾರನಾಗಿ ಶರತ್ ಮರ್ಕಂಜ ಪ್ರಶಸ್ತಿ ಪಡೆದರು.