ನ್ಯೂಸ್ ನಾಟೌಟ್: ಸುಳ್ಯದ ವರ್ತಕ ಸಮುದಾಯ ಭವನದಲ್ಲಿ ಕಾರ್ಯಾಚರಿಸುತ್ತಿದ್ದ ಅಂಜಲಿ ಮೊಂಟೆಸ್ಸರಿ ಸ್ಕೂಲ್ ಇದೀಗ ಆರ್ಯುವೇದ ಕಾಲೇಜು ಮುಂಭಾಗ ಅಡ್ಕಾರ್ ಆರ್ಕೆಡ್ ಗೆ ಸ್ಥಳಾಂತರಗೊಂಡು ಶುಭಾರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಸುಳ್ಯ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಹಾಗೂ ಕೆ.ಸೀತಾರಾಮ ರೈ ಸವಣೂರು ಭೇಟಿ ನೀಡಿ ಶುಭಹಾರೈಸಿದರು.
ಈ ಸಂದರ್ಭ ಕೆವಿಜಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ. ಲೀಲಾಧರ್ ಡಿ.ವಿ. ಹಾಗೂ ಸಂಸ್ಥೆಯ ನಿರ್ದೇಶಕಿ ಗೀತಾಂಜಲಿ ಟಿ.ಜಿ., ಆಗ್ರೋ ಸಂಸ್ಥೆಯ ಮಾಲೀಕ ರಾಮಚಂದ್ರ ಭಟ್, ಪ್ರಭಾಕರ್ ನಾಯಕ್, ಕಟ್ಟಡ ಮಾಲೀಕ ದಿನೇಶ್ ಅಡ್ಕಾರ್ ಉಪಸ್ಥಿತರಿದ್ದರು.
ಅಂಜಲಿ ಮೊಂಟೆಸ್ಸರಿ ಸ್ಕೂಲ್ನಲ್ಲಿ ನಗರ ಮಾದರಿಯ ಉತ್ತಮ ಶಿಕ್ಷಣ ಪದ್ಧತಿಗೆ ಅನುಗುಣವಾದ ಕಲಿಕೆಗೆ ಪೂರಕವಾದ ಕಲಿಕಾ ಸಾಮಾಗ್ರಿಗಳೊಂದಿಗೆ ಸುಸಜ್ಜಿತವಾದ ಪತ್ಯೇಕ ತರಗತಿ ಕೊಠಡಿಯಿದೆ. Play group, Pre kg, Lkg, Ukg, ತರಗತಿಗಳು ಲಭ್ಯವಿರುತ್ತದೆ. 1 ರಿಂದ 10ನೇ ತರಗತಿವರೆಗೆ ಕೋಚಿಂಗ್ ಕ್ಲಾಸ್ , ಡ್ರಾಯಿಂಗ್ ಸಂಗೀತ , ಸ್ಪೋಕನ್ ಇಂಗ್ಲಿಷ್ ತರಗತಿ ಲಭ್ಯವಿದೆ. ಹೆಚ್ಚಿನ ಮಾಹಿತಿಗೆ 95917 62980 ಸಂಪರ್ಕಿಸಬಹುದು.