ನ್ಯೂಸ್ ನಾಟೌಟ್: ಆಹಾರ ಡೆಲಿವರಿ ಸಂಸ್ಥೆ ಝೊಮ್ಯಾಟೊ ಪ್ರಮುಖ ನಗರಗಳಲ್ಲಿ ಶುಲ್ಕ ಹೆಚ್ಚಳ ಮಾಡಿದ್ದು, ದೆಹಲಿ, ಮುಂಬೈ, ಬೆಂಗಳೂರು ನಗರಗಳಲ್ಲಿ ಶುಲ್ಕವನ್ನು ಪ್ರತಿ ಆರ್ಡರ್ ಗೆ 5-6 ರೂಪಾಯಿಗಳನ್ನು ಝೊಮ್ಯಾಟೋ ಹೆಚ್ಚಳ ಮಾಡಿದೆ ಎಂದು ವರದಿ ತಿಳಿಸಿದೆ.
ಝೊಮ್ಯಾಟೋ ಗೆ ಪ್ರತಿಸ್ಪರ್ಧಿಯಾಗಿರುವ ಸ್ವಿಗ್ಗಿ ಸಹ ಹಲವು ನಗರಗಳಲ್ಲಿ ಶುಲ್ಕವನ್ನು ಹೆಚ್ಚಳ ಮಾಡಿತ್ತು. ಆದರೆ ದೆಹಲಿ, ಮುಂಬೈ, ಬೆಂಗಳೂರು ನಗರಗಳಲ್ಲಿ ಪ್ರತಿ ಆರ್ಡರ್ ಗೆ 5 ರೂಪಾಯಿಗಳ ಶುಲ್ಕಕ್ಕೆ ಮತ್ತೆ ಬದಲಾವಣೆ ಮಾಡಿದೆ. ಶುಲ್ಕ ಏರಿಕೆಗೆ ಕಾರಣಗಳನ್ನು ಖಚಿತಪಡಿಸಿಕೊಳ್ಳಲು ಸಂಪರ್ಕಿಸಿದಾಗ, Zomato ಮತ್ತು Swiggy ಎರಡೂ ಸಂಸ್ಥೆಗಳು ಪ್ರತಿಕ್ರಿಯೆ ನೀಡಲು ನಿರಾಕರಿಸಿದವು ಎನ್ನಲಾಗಿದೆ.
Click 👇