ಕಲ್ಲುಗುಂಡಿ: ಇಲ್ಲಿನ ಮುಖ್ಯಪೇಟೆಯಲ್ಲಿ ಗುರುವಾರ ರಾತ್ರಿ ಕಾರೊಂದು ಸೇತುವೆ ಡಿವೈಡರ್ ಗೆ ಗುದ್ದಿ ಮೂವರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಸಂಪಾಜೆಯಿಂದ ಸುಳ್ಯದ ಕಡೆಗೆ ತೆರಳುತ್ತಿದ್ದ ಮಾರುತಿ 800 ಕಾರು ನಿಯಂತ್ರಣ ಕಳೆದುಕೊಂಡು ಸೇತುವೆಗೆ ಅಪ್ಪಳಿಸಿದೆ. ಈ ವೇಳೆ ಜೋರಾಗಿ ಮಳೆ ಬರುತ್ತಿದ್ದರಿಂದ ಚಾಲಕ ನಿಯಂತ್ರಣ ಕಳೆದುಕೊಂಡಿರಬಹುದು ಎಂದು ಹೇಳಲಾಗಿದೆ.ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದೆ. ಗಾಯಾಳುವನ್ನು ಜ್ಯೋತಿಷಿ ಗುರುರಾಜ್, ಸಂಪಾಜೆಯ ಪ್ರೇಮ್ ಎಂದು ಗುರುತಿಸಲಾಗಿದೆ.
ಸಂಪಾಜೆಯಿಂದ ಜ್ಯೋತಿಷಿಯನ್ನು ಕರೆದುಕೊಂಡು ಪೂಜೆಗೆ ಸವಣೂರು ಕಡೆಗೆ ತೆರಳುತ್ತಿದ್ದರು ಎನ್ನಲಾಗಿದೆ. ಘಟನೆಯಲ್ಲಿ ಕಾರು ಚಲಾಯಿಸುತ್ತಿದ್ದ ಚಾಲಕನ ತಲೆ ಭಾಗಕ್ಕೆ ಏಟು ಬಿದ್ದಿದ್ದು ಆತನೂ ಕೂಡ ಆಸ್ಪತ್ರೆಗೆ ದಾಖಲಾಗಿದ್ದಾನೆ. ಗುರುರಾಜ್ ಅವರ ಎದೆ ಭಾಗಕ್ಕೆ ತಾಗಿದ್ದು, ಪ್ರೇಮ್ ಅವರಿಗೆ ಗಂಭೀರ ಗಾಯಗಳಾಗಿವೆ.ಎಲ್ಲರನ್ನೂ ಸುಳ್ಯದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಪಘಾತದ ಸಮಯದಲ್ಲಿ ಕಲ್ಲುಗುಂಡಿಯ ಪಿಕೆ ಎಂ ಟ್ರೇಡರ್ಸ್ ಮಾಲೀಕರಾದ ಇ.ಆರ್ ಅನ್ವರ್ ಸಾದತ್ ಅವರು ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ನೆರವಾಗಿದ್ದಾರೆ. ಪೆರಾಜೆಯ ಸಮೀಪ ತಲುಪಿದಾಗ 108 ಆಂಬುಲೆನ್ಸ್ ಬಂದಿದ್ದರಿಂದ ಆ ವಾಹನಕ್ಕೆ ಗಾಯಾಳುಗಳನ್ನು ಶಿಫ್ಟ್ ಮಾಡಲಾಯಿತು ಎಂದು ಅನ್ವರ್ ನ್ಯೂಸ್ ನಾಟೌಟ್ ಗೆ ವೆಬ್ ಸೈಟ್ ಗೆ ಪ್ರತಿಕ್ರಿಯಿಸಿದ್ದಾರೆ. ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.