ನ್ಯೂಸ್ ನಾಟೌಟ್: ಉಡುಪಿಯ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಪವಾಡ ನಡೆದಿದ್ದು, ಮಾತು ಕೊಟ್ಟಂತೆ ದೈವ ಕಳ್ಳನನ್ನು ಹಿಡಿದುಕೊಟ್ಟು ಭಕ್ತರಲ್ಲಿ ಅಚ್ಚರಿ ಮೂಡಿಸಿದ ಘಟನೆ ಚಿಟ್ಪಾಡಿ ಕಸ್ತೂರ್ಬಾ ನಗರದ ಬಬ್ಬು ಸ್ವಾಮಿ (Babbu Swamy Daiva) ಸನ್ನಿಧಾನದಲ್ಲಿ ನಡೆದಿದೆ.
ಜು.4ರ ನಡುರಾತ್ರಿ ದೈವಸ್ಥಾನದ ಕಾಣಿಕೆ ಡಬ್ಬಿ ಒಡೆದು ಕಳ್ಳತನ ಮಾಡಲಾಗಿತ್ತು. ಮರುದಿನ ಅಂದರೆ ಜು.5ರಂದು ಕಳ್ಳತನ ಪ್ರಕರಣ ಬೆಳಕಿಗೆ ಬಂದಿತ್ತು. ಕಳ್ಳತನ ಬೆಳಕಿಗೆ ಬರುತ್ತಿದ್ದಂತೆ ಭಕ್ತರಿಂದ ಸಾಮೂಹಿಕ ಪ್ರಾರ್ಥನೆ ನಡೆದಿತ್ತು. ಸನ್ನಿಧಾನದಲ್ಲಿ ಕಳ್ಳತನ ಮಾಡಿದರೆ ಅಪಚಾರವಾಗುವುದಿಲ್ಲವೇ ಎಂದು ದೈವಕ್ಕೆ ಪ್ರಶ್ನೆ ಹಾಕಲಾಗಿತ್ತು. 24 ಗಂಟೆಯೊಳಗೆ ಕಳ್ಳನನ್ನು ಹುಡುಕಿ ಕೊಡುವುದಾಗಿ ದೈವ ಅಭಯ ನೀಡಿತ್ತು. ಪ್ರಾರ್ಥನೆಯ ಬಳಿಕ ಜು.6ರಂದು ಬೆಳಿಗ್ಗೆ ಕಳ್ಳ ಪತ್ತೆಯಾಗಿದ್ದಾನೆ.
ಕಳವು ಮಾಡಿದ ವ್ಯಕ್ತಿಯನ್ನು 24 ಗಂಟೆಯ ಒಳಗೆ ಬಂಧಿಸಲಾಗಿದೆ. ಕಳವು ಮಾಡಿ ನಗರದಿಂದ ಪರಾರಿಯಾಗಲು ಬಸ್ ನಿಲ್ದಾಣಕ್ಕೆ ತೆರಳಿ ಅಲ್ಲಿ ಕಾಯುತ್ತಿದ್ದ ವೇಳೆ ಈತ ಸಿಕ್ಕಿಬಿದ್ದಿದ್ದಾನೆ. ಪವಾಡವೆಂಬಂತೆ ಬಸ್ ನಿಲ್ದಾಣದಲ್ಲಿ ಆಟೋ ಚಾಲಕರೊಬ್ಬರು ಆತನನ್ನು ಕಂಡು ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಈತ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಮಲಗಿದ್ದ. ಸಿಸಿಟಿವಿಯಲ್ಲಿ ಕಳ್ಳನ ವಿಡಿಯೋ ನೋಡಿದ್ದ ಆಟೋ ಚಾಲಕ, ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂದು ಗೊತ್ತಾಗಿದೆ. ದೋಚಿದ ಹಣದೊಂದಿಗೆ ಬಾಗಲಕೋಟೆಗೆ ಹೋಗಲು ತಯಾರಿ ಮಾಡಿಕೊಂಡು ಬಸ್ ನಿಲ್ದಾಣಕ್ಕೆ ಬಂದಿದ್ದು, ಅಂದು ಬಸ್ ಸಿಗದ ಕಾರಣ ಬಸ್ ಸ್ಟಾಂಡ್ ನಲ್ಲಿ ಉಳಿದುಕೊಂಡಿದ್ದ ಎನ್ನಲಾಗಿದೆ.
Click 👇