ದುಗ್ಗಲಡ್ಕ: ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಕುರಲ್ ತುಳುಕೂಟ ದುಗ್ಗಲಡ್ಕ ಮತ್ತು ಮಿತ್ರ ಯುವಕ ಮಂಡಲ ಕೊಯಿಕುಳಿ ಆಶ್ರಯದಲ್ಲಿ ಯುಗಾದಿ ಕವಿ ಗೋಷ್ಠಿ ಆಯೋಜಿಸಲಾಗಿದೆ. ದುಗ್ಗಲಡ್ಕ ಸರಕಾರಿ ಪ್ರೌಢ ಶಾಲೆಯಲ್ಲಿ ಶುಕ್ರವಾರ ಬೆಳಗ್ಗೆ 9.30 ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು ಬಿಸುಕಣಿ ಮತ್ತು ವಿವಿಧ ಜಾನಪದ ಸ್ಪರ್ಧೆಗಳು ಕೂಡ ನಡೆಯಲಿವೆ.
ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪೇರಾಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ನೆಹರೂ ಸ್ಮಾರಕ ವಿದ್ಯಾಲಯದ ವಿಶ್ರಾಂತ ಪ್ರಾಂಶುಪಾಲ ಪ್ರೊ ಬಾಲಚಂದ್ರ ಗೌಡ ಎಂ ದೀಪ ಬೆಳಗಿಸಲಿದ್ದಾರೆ. ಪ್ರಗತಿಪರ ಕೃಷಿಕ ಕೆ.ಬಿ ಪುರುಷೋತ್ತಮ ಗೌಡ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಭೀಮರಾವ್ ವಾಷ್ಠರ್, ಕೆಂಚ ವೀರಪ್ಪ ಮರ್ಕಂಜ, ಕೇಶವ ಸುಂತೋಡು, ಪರಮೇಶ್ವರಿ ಪ್ರಸಾದ್ , ಸಹನಾ ಗಿರೀಶ್ ಬಾಳಿಲ, ರಮ್ಯ ಅಡ್ಕಾರ್, ಹೇಮಲತಾ ಗಣೇಶ್ ಕಜೆಗದ್ದೆ, ಮಮತಾ ಕಾರಿಂಜ, ಸೌಮ್ಯ ಡಿ ಎಲಿಮಲೆ, ಯಶೋಧಾ ಎಂ ಬಿ, ಲತಾಶ್ರೀ ಸುಪ್ರಿತ್ ಮೋಂಟಡ್ಕ, ದಯಾಮಣಿ ಹೇಮಂತ್ ಸಂಪಾಜೆ, ಪ್ರಮೀಳಾ ನಿಡುಬೆ, ದೇವಿ ಪ್ರಸಾದ್ ಜೆಸಿ ಕಾಯರ್ತೊಡಿ, ಪೂರ್ಣಿಮಾ ಟಿ , ಜ್ಯೋತಿ ಲಕ್ಷ್ಮೀ ಕೂಟೇಲು ಕ್ರಮವಾಗಿ ಕವನ ವಾಚಿಸಲಿದ್ದಾರೆ. ಈ ಗೋಷ್ಠಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘಟಕರು ಮನವಿ ಮಾಡಿಕೊಂಡಿದ್ದಾರೆ.