ನ್ಯೂಸ್ ನಾಟೌಟ್: ಶ್ರೀ ಮಹಾವಿಷ್ಣು ಸುಬ್ರಮಣ್ಯೇಶ್ವರ ದೇವಸ್ಥಾನದಲ್ಲಿ 800 ವರ್ಷ ಹಳೆಯದಾದ ಕನ್ನಡ ಶಿಲಾ ಶಾಸನವೊಂದು ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಕಡಬದ ಕೌಕ್ರಾಡಿ ಗ್ರಾಮದ ದೋಂತಿಲ ಎಂಬಲ್ಲಿ ಈ ದೇವಸ್ಥಾನದಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದೆ. ಈ ಶಾಸನ ಇದೀಗ ಸ್ಥಳೀಯರಲ್ಲಿ, ಇತಿಹಾಸ ತಜ್ಞರಲ್ಲಿ ಭಾರೀ ಕುತೂಹಲ ಮೂಡಿಸಿದೆ.
30 ಇಂಚು ಎತ್ತರ, 16 ಇಂಚು ಅಗಲ, 4 ಇಂಚು ದಪ್ಪವಿರುವ ಶಾಸನದ ಮುಖ್ಯ ಪಠ್ಯವನ್ನು 14 ಇಂಚು ಅಗಲ ಹಾಗೂ 17 ಇಂಚು ಎತ್ತರದ ಅಳತೆಯಲ್ಲಿದೆ. ಈ ಶಿಲೆಯ ಅರ್ಧ ಇಂಚು ಒಳಭಾಗಕ್ಕೆ ಕೊರೆಯಲಾಗಿದೆ. ಹೊರ ಭಾಗದಲ್ಲಿ ಚೌಕ ಆಕಾರದ ಉಬ್ಬು ಪಟ್ಟಿ ನೀಡಲಾಗಿದೆ. ಒಳ ಭಾಗವನ್ನು ಸಮತಟ್ಟಾಗಿ ಮಾಡಲಾಗಿ ಅಕ್ಷರಗಳನ್ನು ಕೆತ್ತಲಾಗಿದೆ. ಶಾಸನದ ಕೆಳಭಾಗವು 15 ಇಂಚು ಇದೆ. ಶಾಸನದ 17 ಇಂಚು ಮೇಲೆ ಹೋದಂತೆ ಶಾಸನವು ಅರ್ಧಚಂದ್ರಾಕೃತಿ ಆಕಾರವನ್ನು ಪಡೆದಿದೆ. ಶಿರೋಭಾಗದ ಮಂಟಪದ ಮಧ್ಯದಲ್ಲಿ ಒಂದು ನವಿಲಿನ ಆಕೃತಿ ಇದೆ. ಅದರ ಬಲ ಭಾಗದಲ್ಲಿ ಸೂರ್ಯ ಹಾಗೂ ಸಣ್ಣ ದೀಪ, ಎಡ ಭಾಗದಲ್ಲಿ ಅರ್ಧಚಂದ್ರ ಹಾಗೂ ಸ್ವಲ್ಪ ದೊಡ್ಡದಾದ ಉರಿಯುತ್ತಿರುವ ದೀಪದ ಆಕೃತಿಯನ್ನು ಕೆತ್ತಲಾಗಿದೆ.
ಸುಬ್ರಹ್ಮಣ್ಯ ಸ್ವಾಮಿಯ ವಾಹನ ಮಯೂರನ ರೂಪದಲ್ಲಿದ್ದ ಈ ಶಾಸನವನ್ನು ವಿಗ್ರಹವೆಂದು ಅಲ್ಲಿನ ಜನ ಪೂಜಿಸುತ್ತಿದ್ದರು. ಆದರೆ ಇದು ಮೂರ್ತಿಯಲ್ಲ ಶಿಲಾಶಾಸನ ಅನ್ನೋದು ಗೊತ್ತಾದ ಬಳಿಕ ಇದನ್ನು ಬಾಲಾಲಯದ ಹೊರ ಗೋಡೆಯಲ್ಲಿ ಇರಿಸಲಾಗಿದೆ. ಸದ್ಯ ಇದಕ್ಕೆ ಯಾವುದೇ ಪೂಜೆಗಳು ನಡೆಯುತ್ತಿಲ್ಲ. ಈ ಶಾಸನದಲ್ಲಿ ಹದಿನೈದು ಸಾಲುಗಳಿವೆ. ಕನ್ನಡ ಲಿಪಿಯಲ್ಲಿ ಕೆತ್ತಲಾಗಿದೆ. ‘ಕುಕ್ಕೆಯ ದೈವಗಳು’ ಮತ್ತು ‘ತುಳು ರಾಜ್ಯ’ ಎಂಬ ಉಲ್ಲೇಖವನ್ನು ಮಾಡಲಾಗಿದೆ. ವಿಜಯ ನಗರ ಸಾಮ್ರಾಜ್ಯಕ್ಕೆ ಸೇರಿದ್ದು ಎಂದು ಹೇಳಲಾಗುತ್ತಿದೆ. ಸದ್ಯ ಇದರ ಸುತ್ತಲಿನ ಅಧ್ಯಯನವನ್ನು ಇತಿಹಾಸ ತಜ್ಞ ಡಾ.ಉಮಾನಾಥ ಶೆಣೈ ವೈ ಮತ್ತಿತರರು ನಡೆಸುತ್ತಿದ್ದಾರೆ.
Click 👇