ನ್ಯೂಸ್ ನಾಟೌಟ್ : ಕಲ್ಲುಗುಂಡಿಯಿಂದ ನಾಪತ್ತೆಯಾಗಿದ್ದ ವಿವಾಹಿತೆ, ಎರಡು ಮಕ್ಕಳ ತಾಯಿ ಮೈಸೂರಿನಲ್ಲಿ ಬುಧವಾರ (ಜು.3) ಪತ್ತೆಯಾಗಿದ್ದಾರೆ.
ಕಲ್ಲುಗುಂಡಿಯ ದಂಡೆಕಜೆಯ ಜಯಂತಿ ಮನೆಯಿಂದ ನಾಪತ್ತೆಯಾಗಿದ್ದರು. ಪತ್ನಿಗಾಗಿ ಪತಿ ಹುಡುಕಾಟ ನಡೆಸಿದ್ದರು. ಆದರೆ ಆಕೆ ಎಲ್ಲಿಯೂ ಪತ್ತೆಯಾಗಿರಲಿಲ್ಲ. ಈ ಬಗ್ಗೆ ಆಕೆಯ ಗಂಡನ ಸ್ನೇಹಿತರೊಬ್ಬರು ನ್ಯೂಸ್ ನಾಟೌಟ್ ಜೊತೆಗೆ ತಮ್ಮ ಗೆಳೆಯನ ನೋವು ತೋಡಿಕೊಂಡಿದ್ದರು.
ಈ ಬಗ್ಗೆ ನ್ಯೂಸ್ ನಾಟೌಟ್ “ವಿವಾಹಿತ ಮಹಿಳೆ ನಾಪತ್ತೆ, ಎರಡು ಮಕ್ಕಳ ತಾಯಿಯನ್ನು ಹುಡುಕುತ್ತಾ ಪೊಲೀಸ್ ಠಾಣೆಗೆ ಅಲೆಯುತ್ತಿರುವ ಗಂಡ” ಎಂಬ ಶೀರ್ಷಿಕೆಯಡಿಯಲ್ಲಿ ವರದಿ ಪ್ರಕಟಿಸಿತ್ತು. ಈ ವರದಿಯನ್ನು ಮೈಸೂರು ಬಸ್ ಸ್ಟ್ಯಾಂಡ್ ಬಳಿ ನಮ್ಮ ಓದುಗರೊಬ್ಬರು ಗಮನಿಸಿದ್ದಾರೆ. ಆ ವೇಳೆ ಆಕೆ ಅಲ್ಲೇ ಇದ್ದಿದ್ದು ಅವರ ಗಮನಕ್ಕೆ ಬಂದಿದೆ. ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದೀಗ ಪೊಲೀಸರು ಆಕೆಯನ್ನು ಕರೆದುಕೊಂಡು ಕಲ್ಲುಗುಂಡಿಯತ್ತ ಬರುತ್ತಿದ್ದಾರೆ ಎಂದು ತಿಳಿದು ಬಂದಿದೆ.