ನ್ಯೂಸ್ ನಾಟೌಟ್: ಮೂರು ದಿನಗಳ ಹಿಂದೆ, ಸೋಮವಾರ(ಜುಲೈ.1)ದಂದು ಉದಯನ್ ವಿದ್ಯಾರ್ಥಿ ನಿಲಯದಲ್ಲಿ 37 ವರ್ಷದ ಟಿವಿ ಮತ್ತು ಮೊಬೈಲ್ ಮೆಕಾನಿಕ್ ಅನ್ನು ವಿದ್ಯಾರ್ಥಿಗಳ ಗುಂಪೊಂದು ಥಳಿಸಿ ಹತ್ಯೆಗೈದ ನಂತರ, ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ ವಿಧಿ ವಿಜ್ಞಾನ ಅಧಿಕಾರಿಗಳು ಘಟನೆಯಲ್ಲಿ ಬಳಕೆಯಾಗಿದೆಯೆನ್ನಲಾದ ಬ್ಯಾಟ್ ಅನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಬೆಲ್ಗಾಚಿಯ ನಿವಾಸಿಯಾದ ಇರ್ಶಾದ್ ಅಲಂ ಎಂಬ ವ್ಯಕ್ತಿ ಮೊಬೈಲ್ ಕದ್ದಿದ್ದಾನೆ ಎಂಬ ಶಂಕೆಯಲ್ಲಿ ವಿದ್ಯಾರ್ಥಿ ನಿಲಯದಲ್ಲಿನ ವಿದ್ಯಾರ್ಥಿಗಳು ಆತನನ್ನು ಮನ ಬಂದಂತೆ ಥಳಿಸಿ ಹತ್ಯೆಗೈದಿದ್ದರು ಎನ್ನಲಾಗಿದೆ.
ಈ ಸಂಬಂಧ ಇಲ್ಲಿಯವರೆಗೆ 14 ಮಂದಿ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲ್ಕಾತ್ತಾದಲ್ಲಿ ನಡೆದ ಈ ಘಟನೆಯಲ್ಲಿ ನೇರವಾಗಿ ಭಾಗಿಯಾಗಿರುವ ಇನ್ನೂ ಇಬ್ಬರು ವಿದ್ಯಾರ್ಥಿಗಳು ತಲೆ ಮರೆಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಅವರಿಗಾಗಿ ಪೊಲೀಸರು ಶೋಧ ಕಾರ್ಯವನ್ನು ಚುರುಕುಗೊಳಿಸಿದ್ದಾರೆ.
Click 👇