ಚಾಮರಾಜನಗರ: ಮುಸ್ಲಿಂ ಚಾಲಕರ ವಾಹನಗಳಲ್ಲಿ ಹಿಂದೂಗಳು ಪ್ರಯಾಣ ಮಾಡಬಾರದು ಅನ್ನುವಂತಹ ವಾತಾವರಣ ನಿರ್ಮಾಣವಾಗಿದ್ದರೆ ಮತ್ತೊಂದು ಕಡೆ ಹಿಂದೂ-ಮುಸ್ಲಿಂ ಒಂದೇ ಅನ್ನುವಂತಹ ಸೌಹಾರ್ದತೆ ಸಂದೇಶ ಸಾರುವ ವ್ಯಕ್ತಿಗಳು ಕೂಡ ಇದ್ದಾರೆ.
ಹೌದು, ಇಲ್ಲೊಬ್ಬ ವ್ಯಕ್ತಿ ಹಿಂದೂಗಳ ಆರಾಧ್ಯ ದೇವರು, ವಿಘ್ನ ನಿವಾರಕ ಶ್ರೀಗಣೇಶನಿಗೆ ಹಳ್ಳಿಯೊಂದರಲ್ಲಿ ದೇವಸ್ಥಾನ ಕಟ್ಟಿಸಿ ಸುದ್ದಿಯಾಗಿದ್ದಾರೆ. ಚಾಮರಾಜನಗರ ಜಿಲ್ಲೆಯ ಚಿಕ್ಕ ಹೊಳೆ ಯಪಿ.ರೆಹಮಾನ್ ಎಂಬುವರು ಗಣಪತಿಯ ದೇವಸ್ಥಾನವನ್ನೊಂದನ್ನು ಕಟ್ಟಿ , ಅದಕ್ಕೆ ಪೂಜೆ ಸಲ್ಲಿಸಲು ಹಿಂದು ಅರ್ಚಕರನ್ನೇ ನೇಮಕ ಮಾಡಿದ್ದಾರೆ. ಅಷ್ಟೇ ಅಲ್ಲ, ತಮ್ಮ ಪಿಂಚಣಿ ಹಣದಲ್ಲಿ ಅರ್ಚಕರಿಗೆ ತಿಂಗಳಿಗೆ 4 ಸಾವಿರ ರೂ. ಸಂಬಳವನ್ನೂ ನೀಡುತ್ತಿದ್ದಾರೆ. ಈ ವಿಚಾರ ಈಗ ಬೆಳಕಿಗೆ ಬಂದಿದ್ದು , ಅದೆಷ್ಟೋ ಜನ ಹುಬ್ಬೇರಿಸಿದ್ದಾರೆ. ರೆಹಮಾನ್ ಅವರನ್ನು ಶ್ಲಾಘಿಸಿದ್ದಾರೆ. ಅಂದ ಹಾಗೆ ಪಿ.ರೆಹಮಾನ್ ಅವರು ಚಿಕ್ಕಹೊಳೆ ಜಲಾಶಯದಲ್ಲಿ ಗೇಟ್ ಆಪರೇಟರ್ ಆಗಿದ್ದರು . 2018ರಲ್ಲಿ ಇವರು ನಿವೃತ್ತಗೊಂಡಿದ್ದಾರೆ. ಅದೇ ವರ್ಷ ಒಂದು ವಿಶಿಷ್ಟ ಘಟನೆ ನಡೆಯಿತು. ಮತ್ತು ಅದೇ ಘಟನೆಯೇ ರೆಹಮಾನ್ ಅವರು ದೇವಸ್ಥಾನ ನಿರ್ಮಿ ಸಿ, ಅದರಲ್ಲಿ ಗಣೇ ಶನ ವಿಗ್ರಹಸ್ಥಾಪಿಸಲು ಕಾರಣವಾಯಿತು .
2018ರ ಹೊತ್ತಲ್ಲಿ, ರೆಹಮಾನ್ ನಿವೃತ್ತಿಗೆ ಇನ್ನು ಕೆಲವೇ ದಿನಗಳು ಬಾಕಿಯಿದ್ದಾಗ ಅಲ್ಲೇ ಚಿಕ್ಕಹೊಳೆ ಸಮೀ ಪದ ದೇ ವಸ್ಥಾನವೊಂ ದರಲ್ಲಿ ಇದ್ದ ಗಣೇ ಶನ ವಿಗ್ರಹವೊಂದು ಕಾಣೆಯಾಗಿತ್ತು . ಈ ದೇ ಗುಲ ರೆಹಮಾನ್ ಕೆಲಸ ಮಾಡುತ್ತಿದ್ದ ಜಲಾಶಯದ ಸಮೀಪವೇ ಇತ್ತು . ಆ ವಿಗ್ರಹವನ್ನು ರೆಹಮಾನ್ ನೋಡಿದ್ದರು . ದೇವಾಲಯದಿಂದ ಕಾಣೆಯಾದ ವಿಗ್ರಹವನ್ನು ಪೊಲೀಸರು ,ಸಾರ್ವಜನಿಕರು ಹುಡುಕಿದ್ದೇ ಬಂತು. ಆದರೆ ಅದು ಪತ್ತೆಯಾಗಲೇ ಇಲ್ಲ. ಹೀಗೆ ನಾನೊಂದು ದಿನ ರಾತ್ರಿ ಮಲಗಿದ್ದಾಗ ನನಗೊಂದು ಕನಸು ಬಿತ್ತು . ಅದರಲ್ಲಿ ಭಗವಂತ ಗಣಪತಿ ಬಂದು, ನನಗಾಗಿ ಒಂದು ದೇಗುಲ ಕಟ್ಟು ಎಂದು ಹೇಳಿದ. ನಾನು ಕೂಡಲೇ ಎದ್ದು ಕುಳಿತೆ. ನನಗೆ ಆ ಕನಸನ್ನು ತಲೆಯಿಂದ ತೆಗೆದು ಹಾಕಲು ಸಾಧ್ಯವಾಗಲೇ ಇಲ್ಲ. ಹೀಗೆ ಯೋಚಿಸುತ್ತಲೇ ಇದ್ದೆ..ಅದಾಗಿ ಕೆಲವು ದಿನಗಳ ನಂತರ ನನಗೆ ನಿವೃತ್ತಿಯಾಯಿತು . ಈ ವೇಳೆ ನನಗೆ ಒಂದಷ್ಟು ಗ್ರಾಚ್ಯುಟಿ ಹಣವೂ ಬಂತು .ಕೂಡಲೇ ಒಂದು ದೇಗುಲ ನಿರ್ಮಾಣ ಮಾಡಿಸಿ, ಅದರಲ್ಲಿ ಗಣೇಶನ ವಿಗ್ರಹ ಸ್ಥಾಪಿಸಿದೆ ಎಂದು ರೆಹಮಾನ್ ಹೇಳಿದ್ದಾರೆ.